ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲೂ ವಿಷಬಣ್ಣ ಪತ್ತೆ ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಪಾನಿಪುರಿ?
ಬೆಂಗಳೂರು : ಪಾನಿಪುರಿಯಲ್ಲಿ ವಿಷ ಬಣ್ಣ ಬೆರೆತಿರೋದು ಪತ್ತೆಯಾಗಿರುವುದರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಪಾನಿಪೂರಿಯನ್ನು ಬ್ಯಾನ್ ಮಾಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ಇತ್ತೀಚಿಗಷ್ಟೆ ಗೋಬಿ ಮಂಚೂರಿ, ಕಬಾಬ್ಗೆ ಬಳಸುವ ಕೃತಕ ಬಣ್ಣವನ್ನು ಬ್ಯಾನ್ ಮಾಡಿತ್ತು. ಗೋಬಿ ಮಂಚೂರಿ, ಕಬಾಬ್ಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದೀಗ ಪಾನಿಪುರಿಯಲ್ಲೂ ವಿಷಬಣ್ಣ ಬೆರೆತಿರೋದು ಪತ್ತೆಯಾಗ್ತಿದ್ದಂತೆ ಬ್ಯಾನ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಪಾನಿಪೂರಿ ನೀರಿಗೆ ಬಳಸುವ ಕೆಲ ವಸ್ತುಗಳನ್ನು ನಿಷೇಧಿಸುವುದಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಚಿಂತನೆ ನಡೆಸಿದೆ. ಮಸಾಲ ಪುರಿ ಹಾಗೂ ಪಾನಿಪುರಿಯ ಕೆಮಿಕಲ್ ಸಾಸ್ ಬ್ಯಾನ್ ಆಗಲಿದೆ. ಕೇಂದ್ರ ಸರ್ಕಾರದ ಆಹಾರ ಗುಣಮಟ್ಟ ನಿಯಂತ್ರಣ ಸಂಸ್ಥೆ ಪಾನಿಪುರಿ ಹಾಗೂ ಮಸಾಲಪುರಿ ಮಾದರಿ ಪರೀಕ್ಷಿಸಿದೆ. ರಾಜ್ಯಾದ್ಯಂತ 78 ಮಸಾಲ ಪುರಿ ಹಾಗೂ ಪಾನಿಪೂರಿ ಮಾದರಿ ಪರೀಕ್ಷೆ ನಡೆಸಿದಾಗ 18 ಮಾದರಿಯಲ್ಲಿ ಅಸುರಕ್ಷಿತ ಕೆಮಿಕಲ್ ಪತ್ತೆಯಾಗಿದೆ.
ಪಾನಿಪುರಿಯಲ್ಲಿ ಬಳಸೋ ಖಟ್ಟಾ,ಮೀಠಾ ಸಾಸ್ನಲ್ಲಿ ಕೆಮಿಕಲ್ ಪತ್ತೆಯಾಗಿದ್ದು, ಈ ಕೆಮಿಕಲ್ ಮಕ್ಕಳು ಮತ್ತು ವಯಸ್ಸಾದವರ ಆರೋಗ್ಯಕ್ಕೆ ಡೇಂಜರ್ ಆಗಿದೆ. ಹಾಗಾಗಿ ಆರೋಗ್ಯದ ಮೇಲೆ ಎಫೆಕ್ಟ್ ಮಾಡೋ ಕೆಮಿಕಲ್ ಸಾಸ್ ಬ್ಯಾನ್ಗೆ ಇಲಾಖೆ ಚಿಂತನೆ ನಡೆಸಿದೆ.
Post a comment
Log in to write reviews