ಬಿಪಿಲ್ ಕಾರ್ಡ್ ಇದ್ದರೂ ಸಹ ಸರ್ಕಾರ ಕೊಡೋ ಹಣ ಸಾಲೋದಿಲ್ಲ ಹಣ ಪಾವತಿಸಿ ಚಿಕಿತ್ಸೆ ಪಡೆಯಿರಿ ಎಂದ ಭಾರತ್ ಆಸ್ಪತ್ರೆ ಹಾಗೂ ಗಂಥಿ ಸಂಸ್ಥೆ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ದಾಖಲಿಸಲಾಗಿದೆ.
12 ದಿನಗಳ ಹಿಂದೆ ರೂಪಾ ಎನ್ನುವ ಮಹಿಳೆ ಗಂಟಲು ನೋವಿನ ಚಿಕಿತ್ಸೆಗೆಂದು ಭಾರತ್ ಆಸ್ಪತ್ರೆ ಹಾಗೂ ಗಂಥಿ ಸಂಸ್ಥೆ ಗೆ ದಾಖಲಾಗಿದ್ದರು. ಹಾಗೆಯೇ ಈ ಮಹಿಳೆ ಬಿಪಿಎಲ್ ಕಾರ್ಡುದಾರರಾಗಿದ್ದು, ಇದಕ್ಕಾಗಿ ಚನ್ನರಾಯಪಟ್ಟಣ ತಾಲ್ಲೂಕು ಆರೋಗ್ಯಾಧಿಕಾರಿಯಿಂದ ಪತ್ರ ಸಹ ತರಿಸಿಕೊಂಡಿದ್ದರು. ಆದರೂ ಸಹ ಭಾರತ್ ಆಸ್ಪತ್ರೆ ಆಪರೇಷನ್ ಮಾಡಲು ರೋಗಿಯಿಂದ 40ಸಾವಿರಕ್ಕೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸರ್ಕಾರದಿಂದ ನಮಗೆ ಬರುವ ಹಣ ಸಾಕಾಗಲ್ಲ.ಸರ್ಕಾರದಿಂದ ಹಣ ಬರುವ ವರೆಗೆ ಕಾಯೋಕಾಗಲ್ಲ. ಬೇಕಿದ್ದರೆ ಚಿಕಿತ್ಸೆ ಕೊಡಿಸಿ, ಇಲ್ಲದಿದ್ರೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂಬ ದರ್ಪದ ಮಾತನ್ನು ವೈದ್ಯಕೀಯ ಸಿಬ್ಬಂದಿ ಆಡಿದ್ದಾರೆ. ಇದಷ್ಟೇ ಅಲ್ಲದೆ ನಾವು ಆಪರೇಷನ್ ಮಾಡಲು ಎಲ್ಲಾ ಹೊಸ ಸಲಕರಣಿಗಳನ್ನು ಬಳಸುತ್ತೇವೆ.ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಬಳಸಿದ ವಸ್ತುಗಳನ್ನು ಮತ್ತೊಬ್ಬರಿಗೆ ಬಳಸುತ್ತಾರೆ. ಎಂದು ಸರ್ಕಾರಿ ಆಸ್ಪತ್ರೆ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಹಾಗೆಯೇ ರೋಗಿಯ ಕಡೆಯವರು ಚಿಕಿತ್ಸೆಯ ರಶೀದಿ ಕೇಳಿದಾಗ ರಶೀದಿ ಕೊಟ್ರೆ ನೀವು ಸರ್ಕಾರಕ್ಕೆ ದೂರು ಕೊಡ್ತಿರಿ. ಇದೆಲ್ಲಾ ತಲೇನೂವು ಬೇಡ ನಿಮಗೆ ಆದ್ರೆ ಹಣ ಕೊಟ್ಟು ಚಿಕಿತ್ಸೆ ಮಾಡಿಸಿ, ಇಲ್ಲದಿದ್ರೆ ಬೇರೆ ಆಸ್ಪತ್ರೆ ಕರೆದುಕೊಂಡು ಹೋಗಿ ಎಂದು ದರ್ಪದ ಮಾತನ್ನು ಆಡಿದ್ದಾರೆ.
ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಹಳಷ್ಟು ನಡೆಯುತ್ತಿದೆ, ಸರ್ಕಾರ ರೋಗಿಗಳ ಚಿಕಿತ್ಸೆಗೆಂದು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲ ಆಸ್ಪತ್ರೆಗಳು ಅದನ್ನು ರೋಗಿಗಳಿಗೆ ತಲುಪಿಸಲು ಹಿಂದೇಟು ಹಾಕುತ್ತಿವೆ. ಇಂತಹ ಹಣ ಬಾಕ ಆಸ್ಪತ್ರೆಗಳಿಂದಾಗಿ ಒಳ್ಳೆಯ ಆಸ್ಪತ್ರೆಗಳಿಗೂ ಕೆಟ್ಟ ಹೆಸರು. ಇಂತಹ ಘಟನೆಗಳು ಮರುಕಳಿಸಬಾರದೆಂದರೆ. ಸರ್ಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
Post a comment
Log in to write reviews