ಶಹಾಪುರ: ಶಹಪುರ ಅಳ್ವಾನ್ ಗಲ್ಲಿಯಲ್ಲಿ ಗುಂಪು ಘರ್ಷಣೆ ನಡೆದಿದ್ದು, ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಚಿಕ್ಕ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಶುರುವಾದ ಗಲಾಟೆ ಗುಂಪು ಘಷ೯ಣೆ ಹಂತಕ್ಕೆ ತಲುಪಿದೆ. ಈ ಎರಡು ಗುಂಪುಗಳ ಮಧ್ಯದ ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದೆ. ಎರಡು ಗುಂಪುಗಳಲ್ಲಿ ಗಾಯಗೊಂಡವರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಮಯದಲ್ಲಿ ಪೊಲೀಸ್ ಪೇದೆ ಅಮರ್ ಎಂಬವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಮೂರು ಕೆಎಸ್ಆರ್‌ಪಿ, ಮೂವರು ಸಿಪಿಐ ನಿಯೋಜನೆ ಮಾಡಲಾಗಿದೆ.
ಗಲಾಟೆ ಪ್ರಕರಣದಲ್ಲಿ ಕಲ್ಲು ತೂರಾಟ, ತಲ್ವಾರ್ ಪ್ರದರ್ಶನ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಪೊಲೀಸರ ಸಮ್ಮುಖದಲ್ಲಿಯೇ ತಲ್ವಾರ್ ಎಸೆತ ನಡೆದಿದೆ. ಒಂದು ಕೋಮಿನ ಗುಂಪಿನಿಂದ ಗಲಾಟೆ ನಡೆದಿದ್ದು, ಇದರಿಂದ ಜನರು ಭಯಭೀತಗೊಂಡಿದ್ದಾರೆ.
ಸಿಸಿಟಿವಿ ವಿಡಿಯೋದಲ್ಲಿ ಕಿಡಿಗೇಡಿಯೊಬ್ಬ ಸ್ಥಳದಲ್ಲಿದ್ದ ಮಹಿಳೆ ಮೇಲೆ ತಲ್ವಾರ್ ಎಸೆದಿರುವುದನ್ನ ಮಹಿಳಾ ಪೊಲೀಸ್ ಅಧಿಕಾರಿಗೆ, ಮಹಿಳೆಯರು ತೋರಿಸಿದ ದೃಷ್ಯ ಸೆರೆಯಾಗಿದೆ. ಈ ವೇಳೆ ಲಾಠಿ ಹಿಡುದ ಬಂದ ಇಬ್ಬರೂ ಪೊಲೀಸರು ಸಹ ಗಲಾಟೆ ಹತೋಟಿಗೆ ತರಲು ಕಾರ್ಯ ನಡೆಸಿದ್ದ ದೃಷ್ಯ ಕೂಡ ಸೆರೆಯಾಗಿದೆ. ಈ ವೇಳೆ ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದು ಕೃತ್ಯ ಎಸಗಿದವರ ವಿಡಿಯೋವನ್ನು ಪೊಲೀಸರು ಚಿತ್ರೀಕರಣ ಮಾಡಿಕೊಂಡಿರುವುದು ಕಾಣಬಹುದು. ಮಕ್ಕಳ ಕ್ರಿಕೇಟ್ ಜಗಳದಿಂದ ಶುರುವಾಗಿ ಗುಂಪು ಘಷ೯ಣೆಗೆ ತಲುಪಿ ಹಲವರು ಗಾಯ ಗೊಂಡಿದ್ದಾರೆ.
Post a comment
Log in to write reviews