ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಾಗಮಲೆ ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಮಲೆ ಮಾದೇಶ್ವರನ ಭಕ್ತರಿಗೆ ಅರಣ್ಯ ಇಲಾಖೆ ವತಿಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಕಾಡು ಪ್ರಾಣಿಗಳ ನಿರಂತರ ದಾಳಿ ಹಿನ್ನೆಲೆ ಭಕ್ತರು ಚಾರಣಕ್ಕೆ ಹೋಗದಂತೆ 6 ತಿಂಗಳ ಹಿಂದೆಯೇ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು.
ಸದ್ಯ ನಾಗಮಲೆ ಮಲೆ ಮಹದೇಶ್ವರ ಬೆಟ್ಟದಿಂದ 14 ಕಿ.ಮೀ. ದೂರದಲ್ಲಿದ್ದು, 14 ಕಿಲೋ ಮೀಟರ್ ಬರಿಗಾಲಿನಲ್ಲೇ ನಾಗಮಲೆಗೆ ಭಕ್ತರು ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಚಾರಣಕ್ಕೆ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು.
ಇದೀಗ ನಾಗಮಲೆ ಚಾರಣಕ್ಕೆ ಇಲಾಖೆ ಅವಕಾಶ ನೀಡಿದೆ. ಆದರೆ ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಂಡು ತೆರಳಲು ಅವಕಾಶ ನೀಡಲಾಗಿದೆ. ಪ್ರತಿದಿನ 200 ಜನರು ನಾಗಮಲೆಗೆ ಚಾರಣಕ್ಕೆ ಹೋಗಲು ಅವಕಾಶವಿದ್ದು, ಪ್ರತಿಯೊಬ್ಬರಿಗೆ 200 ರೂಪಾಯಿ ಶುಲ್ಕವನ್ನು ಅರಣ್ಯ ಇಲಾಖೆ ವಿಧಿಸಿದೆ. ನಾಗಮಲೆಗೆ ಚಾರಣಕ್ಕೆ ಹೋಗುವ ಭಕ್ತಾಧಿಗಳು www.aranya.gov.kar ಸೈಟ್‌ನಲ್ಲಿ ನೊಂದಾಯಿಸಿಕೊಂಡಿರಬೇಕು ಎಂದು ತಿಳಿಸಿದೆ.
Post a comment
Log in to write reviews