ಬಿಹಾರ: ಭಾರೀ ಮಳೆಯಿಂದಾಗಿ 15 ದಿನಗಳಲ್ಲಿಯೇ ಒಂಭತ್ತು ಸೇತುವೆ ಕುಸಿದ ವರದಿಯಾಗಿದ್ದು, ಸಿವಾನ್ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮೂರು ಸೇತುವೆಗಳು ಕುಸಿದು ಬಿದ್ದಿದೆ.
ಸಿವಾನ್ ಜಿಲ್ಲೆಯ ಪಟೇರಾ, ಧಮಾಯಿ ಗ್ರಾಮದ ತೆವ್ಟಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ಕುಸಿದ ಘಟನೆಗಳು ನಡೆದಿದೆ. ಜಿಲ್ಲೆಯ ಮಹಾರಾಜ್ಗಂಜ್ ಉಪವಿಭಾಗದ ಪತೇರಾ ಗ್ರಾಮದ ದೇವರಿಯಾದಲ್ಲಿ ಮೊದಲ ಘಟನೆ ವರದಿಯಾಗಿದೆ. ಇತ್ತೀಚಿನ ಸೇತುವೆ ಕುಸಿತ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.
Post a comment
Log in to write reviews