ಒಂದೆಡೆ ಅಭಿಷೇಕ್ ಬಚ್ಚನ್ಗೂ ಐಶ್ ನಡುವಿನ ವಿವಾಹ ವಿಚ್ಛೇದನ ವದಂತಿ ಸುದ್ದಿಗಳು, ಐಶ್ ಅಭಿಷೇಕ್ರಿಂದ ಬೇರೆಯಾಗಿ ವಾಸ್ತವ್ಯ ಹೂಡಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ತಾಣದಲ್ಲಿ ಚರ್ಚೆಯಾಗುತ್ತಿದ್ದರೆ, ಇತ್ತ ನಟ ಅಮಿತಾಭ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಮುಂಬೈಯಲ್ಲಿ ಹೊಸ ಆಸ್ತಿಯೊಂದನ್ನು ಖರೀದಿಸಿದ್ದಾರೆ ಎಂದು ಸುದ್ದಿಯಾಗಿದೆ.
ಮುಂಬೈನ ಪ್ರತಿಷ್ಠಿತ ಮುಲುಂದ್ನಲ್ಲಿ ಅಭಿಷೇಕ್ ತಮ್ಮ ತಂದೆಯೊಂದಿಗೆ ಸೇರಿಕೊಂಡು ರೂ 24.95 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಸುದ್ದಿಯಾಗಿದೆ.
ಈ ಖರೀದಿಯು ಬಚ್ಚನ್ ಕುಟುಂಬದ ನಿವ್ವಳ ಮೌಲ್ಯ ಹಾಗೂ ಸ್ವತ್ತುಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಸೇರಿಕೊಂಡು ಈ ಐಷಾರಾಮಿ ಸ್ವತ್ತಿನ ಖರೀದಿ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮುಲುಂದ್ನಲ್ಲಿ 24.95 ಕೋಟಿಯ ಪ್ರಾಪರ್ಟಿ ಖರೀದಿಸಿರುವ ಅಭಿಷೇಕ್, ಅಮಿತಾಭ್ ಬಚ್ಚನ್
ಸ್ವತ್ತುಗಳ ಖರೀದಿಗಾಗಿ ಇರುವ ಆನ್ಲೈನ್ ತಾಣ ಸ್ಕ್ವೇರ್ ಯಾರ್ಡ್ಸ್ ಮೂಲಕ ದೊರೆತಿರುವ ರಿಜಿಸ್ಟ್ರೇಶನ್ ಡಾಕ್ಯುಮೆಂಟ್ಗಳ ಅನುಸಾರ, ಇಟಾರ್ನಿಯಾ, ಒಬೆರಾಯ್ ರಿಯಾಲಿಟೀಸ್ ಪ್ರೀಮಿಯಮ್ ರೆಸಿಡೆನ್ಶಿಯಲ್ನಲ್ಲಿ ತಂದೆ ಮಗ ಪ್ರಾಪರ್ಟಿಗಳನ್ನು ಖರೀದಿಸಿರುವುದಾಗಿ ತಿಳಿದು ಬಂದಿದೆ.
ಸುದ್ದಿ ವಾಹಿನಿ ವರದಿ ಮಾಡಿರುವಂತೆ ಬಚ್ಚನ್ ಕುಟುಂದ ಬಳಿ 10 ಅಪಾರ್ಟ್ಮೆಂಟ್ಗಳಿದ್ದು, ಎಂಟು ಪ್ರಾಪರ್ಟಿಗಳು 1,049 ಸ್ಕ್ವೇರ್ ಫೀಟ್ ವಿಸ್ತೀರ್ಣದ್ದಾಗಿವೆ.
ಇನ್ನುಳಿದ ಎರಡು ಪ್ರಾಪರ್ಟಿಗಳು ಸ್ವಲ್ಪ ಕಡಿಮೆ ಸ್ಥಳಾವಕಾಶವನ್ನು ಹೊಂದಿವೆ. ಇವುಗಳು ತಲಾ 912 ಸ್ಕ್ವೇರ್ ಫೀಟ್ ವಿಸ್ತೀರ್ಣವನ್ನು ಒಳಗೊಂಡಿವೆ ಎನ್ನಲಾಗಿದೆ. ಬಾಲಿವುಡ್ನ ಅತಿ ಶ್ರೀಮಂತ ಕುಟುಂಬದ ಆಸ್ತಿ ಪಾಸ್ತಿ ಪಟ್ಟಿಗೆ ಈ ಹೊಸ ಪ್ರಾಪರ್ಟಿ ಸೇರಿಕೊಂಡಿದೆ.
ಆಸ್ತಿಗಳಲ್ಲಿ ತಂದೆ ಮಗ ಇಬ್ಬರದ್ದೂ ಪಾಲಿದೆ
ಈ ಪ್ರಾಪರ್ಟಿಗಳಲ್ಲಿ ಅಭಿಷೇಕ್ ರೂ 14.77 ಕೋಟಿ ಮೌಲ್ಯದ ಆರು ಪ್ರಾಪರ್ಟಿಗಳನ್ನು ಖರೀದಿಸಿದ್ದರೆ, ಇನ್ನುಳಿದ ಪ್ರಾಪರ್ಟಿಗಳನ್ನು ತಂದೆ ಅಮಿತಾಭ್ ರೂ 10.18 ಕೋಟಿಗೆ ಖರೀದಿಸಿದ್ದಾರೆ. ಇಬ್ಬರೂ ಸೇರಿ ರೂ 1.50 ಕೋಟಿಯ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ ಎಂಬುದು ವರದಿಯಾಗಿದೆ.
ಮದುವೆ ಸಿದ್ಧತೆಯಾ? ದೀಪಾವಳಿ ಹೂಡಿಕೆಯಾ?
ಮದುವೆ ಪ್ಲಾನ್ನಲ್ಲಿರುವ ನಟರು, ನಟಿಯರು ಮನೆ ಖರೀದಿ ಮಾಡೋದು, ಮಾರಾಟ ಮಾಡೋದು, ಫ್ಲ್ಯಾಟ್ ಖರೀದಿಸೋದು ಕಾಮನ್! ಅಭಿಷೇಕ್ ಬಚ್ಚನ್ ಪ್ಲಾನ್ ಇದೇನಾ? ಎನ್ನುವ ಚರ್ಚೆ ಜೋರಾಗಿದೆ. ಕೆಲವರು ನಟ ಎರಡನೇ ಮದುವೆಗೆ ರೆಡಿಯಾಗ್ತಿದ್ದಾರೆ ಎಂದರೆ ಇನ್ನೂ ಕೆಲವರು ಇದು ದೀಪಾವಳಿಯ ಹೂಡಿಕೆ ಎಂದಿದ್ದಾರೆ.
ಬೊರಿವಿಲಿಯಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿರುವ ಅಭಿಷೇಕ್ ಬಚ್ಚನ್
ಅಭಿಷೇಕ್ ಕೆಲವು ತಿಂಗಳ ಹಿಂದೆ ಬೊರಿವಿಲಿಯಲ್ಲಿ ಖರೀದಿಸಿದ ಹೊಸ ಪ್ರಾಪರ್ಟಿ ಖರೀದಿಯ ಬೆನ್ನಲ್ಲೇ ಅಭಿಷೇಕ್ ಹಾಗೂ ಅಮಿತಾಭ್ ಬಚ್ಚನ್ ಜೊತೆಯಾಗಿ ಹೊಸ ಖರೀದಿಗಳನ್ನು ಮಾಡಿದ್ದಾರೆ.
ವರದಿಗಳ ಪ್ರಕಾರ ಜೂನ್ನಲ್ಲಿ ಅಭಿಷೇಕ್ ರೂ 15.42 ಕೋಟಿ ಬೆಲೆಯ ಆರು ಫ್ಲಾಟ್ಗಳನ್ನು ಮುಂಬೈನ ಬೊರಿವಿಲಿಯಲ್ಲಿ ಖರೀದಿಸಿದ್ದಾಗಿ ಸುದ್ದಿಯಾಗಿತ್ತು.
ಒಬೆರಾಯ್ ರಿಯಾಲಿಟಿಯ ಒಬೆರಾಯ್ ಸ್ಕೈ ಸಿಟಿ ಪ್ರಾಜೆಕ್ಟ್ನಡಿಯಲ್ಲಿ ಅಭಿಷೇಕ್ ಅಪಾರ್ಟ್ಮೆಂಟ್ಗಳನ್ನು ಖರೀದಿಸಿರುವುದಾಗಿ ತಿಳಿದು ಬಂದಿದೆ.
ಬೊರಿವಿಲಿ ಈಸ್ಟ್ನಲ್ಲಿರುವ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇ ನೊಂದಿಗೆ ನಿರ್ಮಾಣವಾಗಿರುವ ಅತಿ ಎತ್ತರದ ಕಟ್ಟಡದ 57 ನೇ ಮಹಡಿಯಲ್ಲಿ ಆರು ಅಪಾರ್ಟ್ಮೆಂಟ್ಗಳಿವೆ.
ಆಸ್ತಿ ಖರೀದಿಯಲ್ಲಿ ತಂದೆ ಅಮಿತಾಭ್ ಕೂಡ ಮುಂದಿದ್ದಾರೆ
ಈ ವರ್ಷದ ಆರಂಭದಲ್ಲಿ ಅಲಿಬಾಗ್ನಲ್ಲಿ ಅಮಿತಾಬ್ ಬಚ್ಚನ್ 10 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದರು.
ನಟ ಹೌಸ್ ಆಫ್ ಅಭಿನಂದನ್ ಲೋಧಾನಿಂದ 10,000 ಚದರ ಅಡಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಎ ಆಲಿಬಾಗ್ ಹೆಸರಿನ ಪ್ರಾಜೆಕ್ಟ್ನಡಿಯಲ್ಲಿ ಭೂಮಿಯನ್ನು ಖರೀದಿಸಿರುವುದಾಗಿ ವರದಿಯಾಗಿದೆ.
Post a comment
Log in to write reviews