Samayanews.

Samayanews.

2024-11-14 10:42:43

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕ್ಲಾಕ್‌ ಟವರ್ಗೆ ಎಂ-ಸ್ಯಾಂಡೇ ವಿಲನ್ : ಪಾರಂಪರಿಕ ಕಟ್ಟಡಕ್ಕೆ ಪರಂಪರೆ ಗೊತ್ತಿಲ್ಲದವರಿಗೆ ಮಣೆ

ವಿಶ್ವವಿಖ್ಯಾತ ಪಾರಂಪರಿಕ ಕಟ್ಟಡವೊಂದನ್ನು ʼ ಎಂ-ಸ್ಯಾಂಡ್‌ ʼ  ಬಳಸಿ ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ಮಾಡಲು ಮುಂದಾಗಿದ್ದು ತಿಳವಳಿಕೆ ಇಲ್ಲದ ವ್ಯಕ್ತಿಗೆ ಇದರ ಕಾಮಗಾರಿ ನೀಡಲಾಗಿದೆ.
‘ಕ್ಲಾಕ್‌ ಟವರ್‌’ ಎಂದು ಕರೆಯುವ ʼದೊಡ್ಡ ಗಡಿಯಾರʼ ಮೈಸೂರು ನಗರದ ಹೃದಯಭಾಗದಲ್ಲಿರುವ ಅರಮನೆ ಮತ್ತು ಪುರಭವನದ ಸಮೀಪದ ದುಸ್ಥಿತಿಯಲ್ಲಿರುವ ಈ  ಗಡಿಯಾರವನ್ನು ಸಂರಕ್ಷಿಸಿಲು ನಗರ ಪಾಲಿಕೆ ಕೆಲ ವರ್ಷಗಳ ಹಿಂದೆ ಆರ್ಥಿಕ ನೆರವು ನೀಡಿತ್ತು. ಈ ಹಿಂದೆಯೇ ಡ್ರೋಣ್‌ ಮೂಲಕ ಪುರಾತತ್ವ ಹಾಗೂ ಪರಂಪರೆ ಇಲಾಖೆ ಮ್ಯಾಪಿಂಗ್‌ ನಡೆಸಿ  ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಪಾಲಿಕೆಗೆ ಅಂದಾಜು ಪಟ್ಟಿ ಸಲ್ಲಿಸಿತ್ತು. ಪಾಲಿಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು, ಕಡೆಗೂ ಈಗ 2-3 ವರ್ಷಗಳ ಬಳಿಕ ಕಾಮಗಾರಿ ಪ್ರಾರಂಭಗೊಂಡಿದೆ. 
ವಿಪರ್ಯಾಸವೆಂದರೆ, ಕಾಮಗಾರಿ ಮಾತ್ರ ಯಾವುದೋ ಕಟ್ಟಡ ನವೀಕರಣ ಮಾಡುವಂತೆ ಅವೈಜ್ಞಾನಿಕವಾಗಿ ನಡೆಯುತ್ತಿರುವುದು. ತಜ್ಞರ ಸಲಹೆಯಂತೆ ಗಾರೆ ಬಳಸಿ ಗಡಿಯಾರದ ಗೋಪುರ ಸಂರಕ್ಷಣೆ ಕಾರ್ಯ ನಡೆಯಬೇಕಾಗಿತ್ತು. ಆದರೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದ ವ್ಯಕ್ತಿಗೆ ಸಂರಕ್ಷಣೆ ಕಾಮಗಾರಿ ಜವಾಬ್ದಾರಿ ನೀಡಿರುವುದೇ ಎಡವಟ್ಟಿಗೆ ಕಾರಣ.
ಗಡಿಯಾರದ ಮೇಲ್ಭಾಗದಲ್ಲಿ ಬಿರುಕು, ಒಳ ಭಾಗದಲ್ಲಿ ಶಿಥಿಲಾವಸ್ಥೆ ತಲುಪಿದೆ. ಗಂಟೆಯಲ್ಲಿ ನಿರಂತರವಾಗಿ ಬಿರುಕು ಮೂಡುತ್ತಲೇ ಇದೆ. ಗಡಿಯಾರದ ಕೆಳಗಡೆ ಹೆಗ್ಗಣಗಳು ಬಿಲ ತೋಡಿವೆ. ಸಿಡಿಲಿನಿಂದ ರಕ್ಷಣೆಗೆ ಕಾಪರ್‌ ವೈರ್‌ ಹಾಕಿದ್ದು, ಇದೀಗ ಆ ತಂತಿಗಳು ಕೂಡ ತುಂಡಿರಿಸಿಕೊಂಡು ಬಿದ್ದಿದೆ. ಗಂಟೆ ಮೇಲಿರುವ ಆರ್ಚ್ ಬಿರುಕು ಮೂಡಿದೆ. ಮೇಲಿನ ಗುಮ್ಮಟವೂ ಬಿದ್ದು ಹೋಗಿದೆ. ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಪಾರಂಪರಿಕ ತಜ್ಞರು ಹಾಗೂ ಪುರಾತತ್ವ ಇಲಾಖೆ ದೊಡ್ಡ ಗಡಿಯಾರದ ಬಗ್ಗೆ ಡ್ರೋನ್ ಮ್ಯಾಪಿಂಗ್‌ ಹಾಗೂ ಮೈಕ್ರೋ ಸ್ಟಡಿ ಮಾಡಿ ವರದಿ ಪ್ರಕಾರ, ತಕ್ಷಣ ದುರಸ್ತಿ ಕಾರ್ಯ  ಕೈಗೆತ್ತಿಕೊಳ್ಳಲು ಸಲಹೆ ನೀಡಲಾಗಿತ್ತು. ಈ ಹಿಂದೆ ನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪನಾಗ್‌ ಅವರ ಅವಧಿಯಲ್ಲೇ ದುರಸ್ತಿಗೆ ಅನುದಾನ ಮಂಜೂರಾಗಿತ್ತು. ಆದರೆ, ವರ್ಷಗಳು ಕಳೆದರು ಕಾಮಗಾರಿ ಪ್ರಾರಂಭವಾಗಲೇ ಇಲ್ಲ, ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿದೆ. ಕೆಲಸ ಶುರುವಾಯ್ತಲ್ಲ ಎಂದು ಸಂತೋಷ ಪಡುವ ಸಮಯದಲ್ಲಿ ಅಥವಾ ಹೀಗೆ ಅವೈಜ್ಞಾನಿಕವಾಗಿ ನಡೆಯುತ್ತಿದೆಯಲ್ಲಾ ಎಂದು ದುಖಿಃಸುವೋದು ತಿಳಿಯುತ್ತಿಲ್ಲ ಎಂದು ಈ ಬಗ್ಗೆ ಮೈಸೂರಿನ  ಪಾರಂಪರಿಕ ತಜ್ಞ ಪ್ರೊ.ರಂಗರಾಜು ಅವರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಾರಂಪರಿಕ ಇಲಾಖೆ ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ದುರಸ್ತಿ ಕಾರ್ಯ ನಡೆಸಲು ಅನುಮತಿ ನೀಡಿದೆ. ಆದರೆ ತಜ್ಞರ ಸಲಹೆಯನ್ನು ಕಡೆಗಣಿಸಿ ಕಾಮಗಾರಿ ನಡೆಸಲಾಗುತ್ತಿದೆ. ಗೋಪುರವನ್ನು ಗಾರೆ ಬಳಸಿ ದುರಸ್ತಿ ಮಾಡಬೇಕು. ಆದರೆ, ಗುತ್ತಿಗೆ ಪಡೆದ ಕಾಂಟ್ರ್ಯಾಕ್ಟರ್ ಎಂ-ಸ್ಯಾಂಡ್‌ ಬಳಸಿ ರಿಪೇರಿ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಅರಸರ ಕೊಡುಗೆ 
ದೊಡ್ಡ ಗಡಿಯಾರ ನೆಲದಿಂದ ಸುಮಾರು 75 ಅಡಿ ಎತ್ತರದಲ್ಲಿದೆ. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆಯಲ್ಲಿದ್ದ ನೌಕರರು ಮತ್ತು ಅಧಿಕಾರಿಗಳು ಹಣವನ್ನು ಸಂಗ್ರಹಿಸಿ ಈ ಸ್ಮಾರಕವನ್ನು ನಿರ್ಮಿಸಿದ್ದರು. 1990ರವರೆಗೂ ಇದರ ಘಂಟಾನಾದ ಐದು ಕಿ.ಮೀ.ವರೆಗೂ ಗಂಟೆಗೊಮ್ಮೆ ಕೇಳಿಸುತ್ತಿತ್ತು ಇದು ಗಡಿಯಾರದ ವಿಶೇಷತೆ. ಆದರೆ, ಕಟ್ಟಡದ ಸುರಕ್ಷತೆ ದೃಷ್ಟಿಯಿಂದ 1990ರಲ್ಲಿ ಗಡಿಯಾರದ ಗಂಟೆ ಬಾರಿಸುವುದನ್ನು ನಿಲ್ಲಿಸಲಾಯಿತು.

img
Author

Post a comment

No Reviews