Samayanews.

Samayanews.

2024-11-15 07:59:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನೀಟ್ ರದ್ದು ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಶಿಫಾರಸು 

ಚೆನೈ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ರದ್ದು ಮಾಡಿ ಎಂದುತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದ ಆಯೋಗ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’  (ನೀಟ್) ಅನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ಆಯೋಗವೊಂದು ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದೆ. 12ನೇ ತರಗತಿಯ ಅಂಕಗಳನ್ನೇ ಆಧರಿಸಿ ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾವಕಾಶ ಕಲ್ಪಿಸುವಂತೆಯೂ ಸಲಹೆಯನ್ನೂ ನೀಡಿದೆ.
ವಿವಿಧ ಬೋರ್ಡ್‍ಗಳ ಅಡಿಯಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುವಂತೆ ಸರ್ಕಾರ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ  ಎ.ಕೆ. ರಾಜನ್ ನೇತೃತ್ವದ ಅತ್ಯುನ್ನತ ಸಮಿತಿ ತನ್ನ ವರದಿಯಲ್ಲಿ ಶಿಫಾರಸನ್ನ ಮಾಡಲಾಗಿದೆ.
ತಮಿಳುನಾಡು ಸರ್ಕಾರವು ಈ ವರದಿಯನ್ನು ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೂ ತರ್ಜುಮೆಗೊಳಿಸಲಾಗಿದೆ. ಅಲ್ಲದೆ ಹಲವು ರಾಜ್ಯ ಸರ್ಕಾರಗಳ ಜತೆಗೆ ವರದಿಯನ್ನು ಕೂಡ ಹಂಚಿಕೊಂಡಿದ್ದು, ನೀಟ್ ಬಡ ವಿದ್ಯಾರ್ಥಿಗಳ ವಿರೋಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದಾಗಿದೆ ಎಂಬ ವಾದವನ್ನ ಸತ್ಯ ಎಂದು ಸಾಬೀತುಪಡಿಸಲು ಯತ್ನಿಸಿದೆ.
ತಮಿಳುನಾಡಿನಲ್ಲಿ 2021ರಲ್ಲಿ ಅಧಿಕಾರಕ್ಕೆ ಬಂದ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ, ನೀಟ್ ಆಧರಿತ ಪ್ರವೇಶ ಪರೀಕ್ಷೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನ್ಯಾಯಾಧೀಶ ಎ.ಕೆ. ರಾಜನ್ ನೇತೃತ್ವದಲ್ಲಿ ತಜ್ಞರ ಆಯೋಗವನ್ನು ರಚನೆ ಮಾಡಿತ್ತು. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಅಭಿಪ್ರಾಯದ ಜೊತೆಗೆ ವಿಸ್ತೃತ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿಸಿ,ಆಯೋಗ ವರದಿಯನ್ನ ಸಿದ್ಧಪಡಿಸಿದೆ. ಈ ವರದಿಯನ್ನ ಕನ್ನಡವೂ ಸೇರಿದಂತೆ ವಿವಿಧ ಭಾಷೆಯಲ್ಲಿರುವ ವರದಿಯನ್ನು ಸ್ಟಾಲಿನ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
 

img
Author

Post a comment

No Reviews