ಟಾಪ್ 10 ನ್ಯೂಸ್
ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತದಲ್ಲಿ ಮೃತ, ಗಾಯಾಳುಗಳಿಗೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ
ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ 20 ಲಕ್ಷ ಮತ್ತು ಗಾಯಗೊಂಡವರಿಗೆ 3 ಲಕ್ಷ ಪರಿಹಾರವನ್ನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಟರ್ಮಿನಲ್-1 ಮೇಲ್ಛಾವಣಿಯ ಒಂದು ಭಾಗ ಇಂದು (ಜೂನ್ 28 ಶುಕ್ರವಾರ) ಬೆಳಗ್ಗೆ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. 6 ಮಂದಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಭೇಟಿ ನೀಡಿ ಪರಿಶೀಲಿಸಿ ಮಾದ್ಯಮಗಳೊಂದಿಗೆ ಮಾತಾನಾಡಿದರು.
ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ 20 ಲಕ್ಷ ಮತ್ತು ಗಾಯಗೊಂಡವರಿಗೆ 3 ಲಕ್ಷ ಪರಿಹಾರವನ್ನ ಒದಗಿಸಲಾಗುವುದು ಹಾಗೂ ದೆಹಲಿ ವಿಮಾನ ನಿಲ್ದಾಣ ಮತ್ತು ದೇಶಾದ್ಯಂತ ಅಂತಹ ರಚನೆಗಳನ್ನು ಹೊಂದಿರುವ ಇತರ ವಿಮಾನ ನಿಲ್ದಾಣಗಳಲ್ಲಿನ ರಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ತಿಳೀಸಿದರು.
Post a comment
Log in to write reviews