ಮುಂಬೈ: ನೀವು ಐಸ್ಕ್ರೀಂ ಪ್ರಿಯರಾ..? ಹಾಗಾದ್ರೆ ಈ ಸುದ್ದಿಯನ್ನ ಒಮ್ಮೆ ಓದಿ.. ಸಾಮಾನ್ಯವಾಗಿ ಐಸ್ಕ್ರೀಂ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರಂತು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಮುಂಬೈನಲ್ಲಿ ನಡೆದ ಘಟನೆ ಐಸ್ಕ್ರೀಂ ಪ್ರಿಯರಿಗೆ ದೊಡ್ಡ ಆಘಾತವಾಗೋದಂತು ಸತ್ಯ.
ಮುಂಬೈನ ಮಲಾಡ್ ಎಂಬಲ್ಲಿ ಮಹಿಳೆಯೊಬ್ಬರು ಆನ್ಲೈನ್ನಲ್ಲಿ ಕೋನ್ ಐಸ್ ಕ್ರೀಂ ಆರ್ಡರ್ ಮಾಡಿದ್ದಾರೆ. ಐಸ್ಕ್ರೀಂ ಡೆಲಿವರಿ ಆಗುತ್ತಿದ್ದಂತೆ ಅದನ್ನು ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿದ್ದಾರೆ. ಈ ವೇಳೆ ಐಸ್ ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ನೇರವಾಗಿ ಮಲಾಡ್ ಪೊಲೀಸ್ ಠಾಣೆಗೆ ಬಂದು ಯುಮ್ಮೋ ಐಸ್ಕ್ರೀಂ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ಕೈ ಬೆರಳು ಅನ್ನು ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಿದ್ದು ತನಿಖೆ ಮುಂದುವರಿಸಿದ್ದಾರೆ.
Post a comment
Log in to write reviews