ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಮಹಾಸಮರ ಮತದಾನ ಮಂಗಳವಾರ ಮೇ 7 ರಂದು ನಡೆಯಲಿದೆ.
28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಉಳಿದ 14 ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕಣದಲ್ಲಿ ಒಟ್ಟು 227 ಅಭ್ಯರ್ಥಿಗಳಿದ್ದಾರೆ.ಅದರಲ್ಲಿ 206 ಪುರುಷ, 21 ಮಹಿಳಾ ಹುರಿಯಾಳುಗಳಿದ್ದಾರೆ. ಇಂದು ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ರಾಜ್ಯದ 14 ಕ್ಷೇತ್ರಗಳಲ್ಲಿ 2,59,52,958 ಅರ್ಹ ಮತದಾರರಿದ್ದಾರೆ. ಇದರಲ್ಲಿ 1,29,83,406 ಪುರುಷ ಮತದಾರರು, 1,29,67,607 ಮಹಿಳೆಯರು ಹಾಗೂ 1,945 ಇತರೆ ಮತದಾರರು ಇದ್ದಾರೆ.
85 ವರ್ಷ ಮೇಲ್ಪಟ್ಟವರು 2,29,263 ಮಾತದಾರರಿದ್ದಾರೆ. ಯುವ ಮತದಾರರು 6,90,929 ಹಾಗೂ ಸೇವಾ ಮತದಾರರು 35,465 ರಷ್ಟಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರರು ಸೇರಿದಂತೆ 227 ಅಭ್ಯರ್ಥಿಗಳು ಹುರಿಯಾಳುಗಳಾಗಿದ್ದಾರೆ.
ಎಲ್ಲೆಲ್ಲಿ ಮತದಾನ.?
ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಂಗಳವಾರ ಮೇ 7 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Tags:
- lok sabha election 2024
- lok sabha election
- 2024 lok sabha election
- lok sabha elections 2024
- lok sabha elections
- election 2024
- 2024 lok sabha elections
- loksabha election 2024
- lok sabha election date
- lok sabha election 2024 live
- lok sabha elections 2024 update
- lok sabha election 2024 news
- lok sabha election 2024 public opinion
- lok sabha election 2024 phase 1
- lok sabha election voting
- lok sabha election 2024 voting live
- elections
Post a comment
Log in to write reviews