ಬೆಂಗಳೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕುಟುಂಬದೊಂದಿದೆ ಆಚರಿಸಿಕೊಂಡಿದ್ದಾರೆ.
ಸಂಕ್ರಾತಿ ಹಬ್ಬವನ್ನು ಸಂಭ್ರಮಿಸಿದ ಖುಷಿಯ ಕ್ಷಣಗಳ ಪೋಟೋಗಳನ್ನು ದರ್ಶನ್‌ರ ಮಗ ವಿನೀಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ದರ್ಶನ್, ತಾಯಿ ವಿಜಯಲಕ್ಷ್ಮಿ ಮತ್ತು ಚಿಕ್ಕಪ್ಪ ದಿನಕರ ತೂಗುದೀಪ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗಾಗಲೇ ಸಾಕಷ್ಟು ವೈರಲ್ ಆಗಿದ್ದು, ದರ್ಶನ್‌ರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷವೂ ದರ್ಶನ್ ಅವರ ಮನೆಯಲ್ಲಿ ಸಾಂಕ್ರಾತಿ ಹಬ್ಬ ಜೊರಗಿಯೇ ಆಚರಿಸುತ್ತಾರೆ ಅದರಂತೆಯೇ ಈ ವರ್ಷವು ಮೈಸೂರಿನಲ್ಲಿರುವ ತಮ್ಮ ಫಾರಂ ಹೌಸ್‌ನಲ್ಲಿ ತಂದೆ-ತಾಯಿ ಹಾಗು ಚಿಕ್ಕಪ್ಪನ ಜೊತೆ ಸಂಕ್ರಾತಿ ಹಬ್ಬ ಆಚರಿಸಿದ್ದಾರೆ. ಕೋರ್ಟ್ ಟೆನ್ಶನ್ ಅಲ್ಲಿಯೂ ಹಬ್ಬದ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದಾರೆ.
ಇದರ ನಡುವೆ ಜ.14ರ ಸಂಜೆ ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ನಿಮ್ಮ ಸಂತೋಷವೆಂಬ ಗಾಳಿ ಪಟ ಎತ್ತರಕ್ಕೆ ಹಾರಲಿ ಸಮೃದ್ದಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿ ದರ್ಶನ್ ಮಾಡಿದ ಮೊದಲ ಪೋಸ್ಟ್ ಇದಾಗಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ತೀರಾ ಸಂತಸ ವ್ಯಕ್ತಪಡಿಸಿದ್ದಾರೆ.
Post a comment
Log in to write reviews