ಬೆಂಗಳೂರು: ಮುಂಗಾರಿನ ಆರ್ಭಟ ಎಲೆಲ್ಲೂ ಜೋರಾಗಿದ್ದು ಮುಂದಿನ 48 ಗಂಟೆ ರಣಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಮತ್ತು ಮಲೆನಾಡು ಕರ್ನಾಟಕದಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಈ ರೀತಿ ಪರಿಸ್ಥಿತಿ ಇರುವಾಗಲೆ ಹವಾಮಾನ ಇಲಾಖೆ ಮುಂದಿನ 48 ಗಂಟೆ ಕಾಲ ಅಂದ್ರೆ 2 ದಿನಗಳ ಕಾಲ ಭೀಕರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ ಸೇರಿ ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್, ಕೋಲಾರದಲ್ಲೂ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ, 3-4 ದಿನ ಕಾಲ ಮೋಡ ಕವಿದ ವಾತವರಣ ಇರಲಿದ್ದು. ಜುಲೈ 11, 12 ಹಾಗೂ 13 ರಂದು ಬಿರುಗಾಳಿ ಸಹಿತ ಭಾರೀ ಮಳೆ ಬೀಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ ಎಂದು ಮುನ್ಸೂಚನೆ ನೀಡಿ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
Post a comment
Log in to write reviews