ಬೆಂಗಳೂರು : ಉತ್ತರಾಖಂಡದ ಸಹಸ್ರತಾಲ್‌ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ 13 ಮಂದಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಕರೆತರಲಾಗಿದೆ.
ರಕ್ಷಿಸಲ್ಪಟ್ಟ ಚಾರಣಿಗರನ್ನು ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿಳಿದಿದ್ದು, ಅವರ ಮನೆಗಳಿಗೆ ತಲುಪಿದ್ದಾರೆ. ಇದರಿಂದಾಗಿ ಮೃತ್ಯು ಕೂಪದಂತಿದ್ದ ಸಹಸ್ರತಾಲ್‌ನ ಹಿಮದ ಹೊದಿಕೆಯಿಂದ ಬಚಾವಾಗಿ ಚಾರಣಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ದುರಂತದ ಬಗ್ಗೆ ಸಚಿವ ಕೃಷ್ಣಬೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 22 ಜನ ಬೆಂಗಳೂರಿಗರು ಚಾರಣಕ್ಕೆ ಹೋಗಿದ್ದರು. 9 ಜನರು ಮೃತಪಟ್ಟಿದ್ದಾರೆ. ಉಳಿದವರನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇವೆ. ಉತ್ತರಕಾಶಿಯಿಂದ ಡೆಹರಾಡೂನ್ ಮೂಲಕ ಮೃತದೇಹಗಳನ್ನ ತರಲಾಗುತ್ತಿದೆ. 9 ಮೃತದೇಹಗಳನ್ನ ತರುವ ಚಾರ್ಟರ್ ವಿಮಾನ ಸಿಗಲಿಲ್ಲ. ಹೀಗಾಗಿ ತಡ ಆಗುತ್ತಿದೆ. ಬೆಳಗಿನ ಜಾವದಿಂದ ಎರಡೆರೆಡು ಮೃತದೇಹಗಳಂತೆ ಐದು ವಿಮಾನದ ಮೂಲಕ ಬರುತ್ತದೆ ಎಂದರು.
Post a comment
Log in to write reviews