ಮುಖ್ಯಮಂತ್ರಿಯವರೇ ಹಂಚಿಕೆ ಮಾಡಿರುವ 1400 ನಿವೇಶನಗಳನ್ನು ಜಪ್ತಿ ಮಾಡಿ: ಬಿಜೆಪಿ ಶಾಸಕ ಶ್ರೀವತ್ಸ
ಮೈಸೂರು: ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸರವರು 2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ 1400ಕ್ಕೂ ಹೆಚ್ಚು ನಿವೇಶನಗಳನ್ನ ಜಪ್ತಿ ಮಾಡುವಂತೆ ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಕೊಟ್ಟಿರುವ ಎಲ್ಲಾ ನಿವೇಶನಗಳನ್ನ ಜಪ್ತಿ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇನೆ ಎಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜೊತೆಗೆ 50:50 ಅನುಪಾತದಲ್ಲಿ ತೆಗೆದುಕೊಂಡಿರುವ ಸೈಟು ಪರಬಾರೆ ಆಗುತ್ತಿದೆ ಎಂಬ ಮಾಹಿತಿ ಇದೆ. ಇದಕ್ಕೆ ಕಡಿವಾಣ ಹಾಕಲು ಸಬ್‌ರಿಜಿಸ್ಟರ್ ಕಚೇರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮರೀಗೌಡ ಅವರೂ ರಾಜೀನಾಮೆ ಕೊಟ್ಟಿದ್ದಾರೆ. ಅಲ್ಲದೇ ಮುಡಾ ಪ್ರಕರಣದಲ್ಲಿ ತಾಂತ್ರಿಕ ಸಮಿತಿ ಕೊಟ್ಟಿರುವ ವರದಿ ಬಗ್ಗೆ ಇನ್ನೂ ತನಿಖೆಯಾಗಿಲ್ಲ. ಇಬ್ಬರು ಮುಡಾ ಆಯುಕ್ತರು ಬಾಕಿಯಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ. ಅದಕ್ಕೆ ಸಿಎಂ ತನಿಖೆ ನಡೆಯುತ್ತಿದೆಯಲ್ಲಾ ನೋಡೋಣ ಎಂದು ಪ್ರತಿಕ್ರಿಯಿಸಿರುವುದಾಗಿ ತಿಳಿಸಿದ್ದಾರೆ.
ಮುಡಾದಲ್ಲಿ ಸುಮಾರು 1400ಕ್ಕೂ ಹೆಚ್ಚು ನಿವೇಶನಗಳು 50:50 ಅನುಪಾತದಲ್ಲಿ ಹಂಚಿಕೆ ಆಗಿದ್ದು, ಅವೆಲ್ಲವನ್ನೂ ಜಪ್ತಿ ಮಾಡಿ ತನಿಖೆ ನಡೆಸಬೇಕು. ಅರ್ಹರಿದ್ದರೆ ಅವರಿಗೆ ಸೈಟು ನೀಡಲಿ, ಉಳಿದವುಗಳನ್ನು ಜಪ್ತಿ ಮಾಡಲಿ. ಜೊತೆಗೆ ಕೆಲವರು ಸೈಟು ನಮ್ಮ ಬಳಿಯಿದ್ದರೆ ತೊಂದರೆ ಅಂತ ಬೇರೆಯವರಿಗೆ ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಅದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮುಡಾದಲ್ಲಿ ಹಂಚಿಕೆ ಆಗಿರುವ 4875 ಸೈಟುಗಳ ಬಗ್ಗೆಯೂ ಹೋರಾಟ ಮಾಡುತ್ತಿದ್ದೇವೆ. ಅದರಲ್ಲಿ 14 ಸೈಟು ವಾಪಸ್ ಬಂದಿದೆ. ಇದರೊಂದಿಗೆ ಬದಲಿ ನಿವೇಶನಗಳಲ್ಲೂ ವಂಚನೆ ಆಗಿದೆ ಎಂದು ಆರೋಪಿಸಿದ್ದಾರೆ.
Post a comment
Log in to write reviews