Samayanews.

Samayanews.

2024-11-15 07:19:15

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

15 ಸಿಮ್‌ಕಾರ್ಡ್‌ ಇಟ್ಟು ಸಂತ್ರಸ್ತೆಯರಿಗೆ ನಗ್ನರಾಗುವಂತೆ ಪ್ರಜ್ವಲ್‌ ಬೆದರಿಕೆ

ಹಾಸನ: ಪ್ರಜ್ವಲ್ ರೇವಣ್ಣ ಬಳಿ 15 ಸಿಮ್‌ಗಳಿದ್ದು ಅವುಗಳ ಮೂಲಕ ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ ಹಾಕಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಒಂದೊಂದೇ ಕೃತ್ಯಗಳು ಬಯಲಿಗೆ ಬರುತ್ತಿವೆ.
ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಿಮ್‌ಗಳು ಇದೆ. ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎನ್ನಲಾಗಿದೆ. ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‌ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು ಮಕ್ಕಳಿಗೆ ಸೀಟ್ ಕೇಳಿಕೊಂಡು ಬಂದವರ ಮೇಲೂ ಕಣ್ಣು ಹಾಕಿದ್ದ. ಅವರ ಬಳಿ ಫೋನ್ ನಂಬರ್ ಪಡೆದು ಪದೇ ಪದೇ ಕಾಲ್ ಮಾಡುತ್ತಿದ್ದ. ಕ್ರಮೇಣ ಅವರೊಂದಿಗೆ ಸಲುಗೆ ಬೆಳೆಸಿ ಕರೆ ಮಾಡುತ್ತಿದ್ದ. ನಂತರ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ.
ಇಷ್ಟು ಮಾತ್ರವಲ್ಲದೇ ನನ್ನೊಂದಿಗೆ ಸಹಕರಿಸದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಇತ್ತೀಚಿಗೆ ಸಂತ್ರಸ್ತೆಯೊಬ್ಬರು ಕೊಟ್ಟ ದೂರಿನಲ್ಲಿ ಪ್ರಜ್ವಲ್ ಕರಾಳಮುಖ ಬಯಲು ಮಾಡಿದ್ದಾರೆ.

img
Author

Post a comment

No Reviews