ಯುವ ಸಮುದಾಯ ಜಾಗೃತಿಗಾಗಿ 2500 ಕಿ.ಮೀ ಸೈಕಲ್ ಯಾತ್ರೆ : ಹಾವೇರಿ ಯುವಕನ ಸಂಕಲ್ಪ.
ಹಾವೇರಿಯಿಂದ ಕನ್ಯಾಕುಮಾರಿಗೆ ಯುವಕನ ಸೈಕಲ್ ಮೂಲಕ ಸುಮಾರು 2500 ಕಿ.ಮೀ ದೂರ ಕ್ರಮಿಸುವ ಸಂಕಲ್ಪ ಮಾಡುತಿದ್ದಾರೆ. ಹಾದಿ ತಪ್ಪುತ್ತಿರುವ ಯುವ ಸಮುದಾಯ ಜಾಗೃತಿ ಮೂಡಿಸುವ ಉದ್ದೇಶದಿಂದ ಇವರು ಯಾತ್ರೆಯ ಕೈಗೊಂಡಿದ್ದಾರೆ. ಸ್ವಾಮಿ ವಿವೇಕಾನಂದರ ಹೆಸರಿಟ್ಟುಕೊಂಡು, ವಿವೇಕಾನಂದ ತತ್ವಗಳ ಮೈಗೂಡಿಸಿಕೊಂಡಿರುವ ಯುವಕ ಹಾವೇರಿಯ ವಿವೇಕಾನಂದ ಇಂಡಳಗಿ ಮೇ.10 ರ ಬಸವ ಜಯಂತಿಯಂದು ಹಾವೇರಿಯಿಂದ ಯಾತ್ರ ಹೊರಟಿದ್ದಾರೆ. ಇದು ಇವರ ಎರಡನೇ ಯಾತ್ರೆ. ಇದಕ್ಕೂ ಮೊದಲು ಹಾವೇರಿಯಿಂದ ಕೇದಾರನಾಥಕ್ಕೆ ಸೈಕಲ್ ಯಾತ್ರೆ ಮಾಡಿದ್ದರು. ಈಗ ಹಾವೇರಿಯಿಂದ ಕನ್ಯಾಕುಮಾರಿ, ರಾಮೇಶ್ವರಂ ವರಗೆ ಎರಡನೇ ಯಾತ್ರೆ ಬೆಳೆಸಿರುವ ವಿವೇಕಾನಂದ, ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಮಿಸಿದ್ದಾರೆ. ಮೈಸೂರಿನ ಕೆಲವು ಧಾರ್ಮಿಕ ಸ್ಥಳಗಳ ಭೇಟಿ ನೀಡಿ ಚಾಮರಾಜನಗರದತ್ತ ಪಯಣ ಬೆಳೆಸಿದ್ದಾರೆ. ಚಾಮರಾಜನಗರ, ಕೊಯಮ್ಮತ್ತೂರು, ಮಧುರೈ, ಮೀನಾಕ್ಷಿ, ರಾಮೇಶ್ವರಂ ಮೂಲಕ ಕನ್ಯಾಕುಮಾರಿಗೆ ಹೋಗಲು ಸಂಕಲ್ಪ ಮಾಡಿದ್ದಾರೆ. ಯುವ ಸಮುದಾಯ ವ್ಯಸನಗಳಿಂದ ದೂರಾಗಬೇಕು, ದೇಶದಲ್ಲಿ ಉತ್ತಮ ಪ್ರಜೇಯಾಗಬೇಕು. ಪರಿಸರ ಸಂರಕ್ಷಣೆ ಮಾಡಬೇಕು ಎಂದು ನೈತಿಕ ಪಾಠ ಹೇಳಿ ಹೊರಟ ಯಾತ್ರಾರ್ಥಿ ವಿವೇಕಾನಂದ. 25 ದಿನಗಳ ಕಾಲ ಸೈಕಲ್ ಯಾತ್ರೆ ಮಾಡುವ ಸಂಕಲ್ಪ ಮಾಡಿದ್ದಾರೆ. ಪ್ರತಿದಿನ 100 ಕಿ.ಮೀ ಕ್ರಮಿಸುವ ಸಂಕಲ್ಪದ ಜೊತೆಗೆ ಸಾಗುತ್ತಿದ್ದಾರೆ. ಈಗಾಗಲೇ ಹದಿನೈದು ದಿನ ಮುಗಿಸಿ ಉಳಿದ 10 ದಿನಗಳಲ್ಲಿ ತಲುಪಿ ಅಲ್ಲಿ ಎರಡು ದಿನ ತಂಗಿ ವಿಶ್ರಮಿಸಿ ವಿವೇಕಾನಂದ ಅವರು ಬಳಿಕ ರೈಲಿನ ಮೂಲಕ ವಾಪಸ್ ತವರಿಗೆ ತೆರಳಲಿದ್ದಾರೆ.
Post a comment
Log in to write reviews