4 ತಿಂಗಳಲ್ಲಿ 430 ಕೊಲೆ, 198 ಅತ್ಯಾಚಾರ.! ಇದೇ ಕಾಂಗ್ರೆಸ್ ಗ್ಯಾರಂಟಿ : ಬಿಜೆಪಿ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ ಕೊಲೆ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ, ಇತರೆ ಅಪರಾಧ ಪ್ರಕರಣಗಳು 2024ರಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು (Murder), 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕೊಲೆ, ಅತ್ಯಾಚಾರ, ಡ್ರಗ್ಸ್ ಮಾಫಿಯಾ, ಸೈಬರ್ ಅಪರಾಧಗಳು ನಿರಂತರವಾಗಿ ಹೆಚ್ಚಳವಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime records Bureau) ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಗಗನಕ್ಕೇರಿದ ಅಪರಾಧ ಪ್ರಕರಣ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ ಕೊಲೆ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ, ಇತರೆ ಅಪರಾಧ ಪ್ರಕರಣಗಳು 2024ರಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. ಇವುಗಳ ಜೊತೆಗೆ ಡ್ರಗ್ಸ್ ಪ್ರಕರಣಗಳು ಕೂಡ ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ಸೈಬರ್ ವಂಚನೆ ಪ್ರಕರಣ ಮಿತಿ ಮೀರಿವೆ. ಹಲ್ಲೆ ಪ್ರಕರಣಗಳಂತೂ ಗಗನಕ್ಕೇರುತ್ತಿವೆ.
ಅಪರಾಧ ಪ್ರಕರಣಗಳ ವಿವರ :
ಎನ್ಸಿಆರ್ಬಿ ಅಂಕಿ ಅಂಶಗಳ ಪ್ರಕಾರ 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ರಾಜ್ಯದಲ್ಲಿ 430 ಕೊಲೆ ಪ್ರಕರಣ ದಾಖಲಾದರೆ, 198 ಅತ್ಯಾಚಾರ ಹಾಗೂ 2327 ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿವೆ. 1262 ಮಕ್ಕಳ ಮೇಲೆ ದೌರ್ಜನ್ಯ (POCSO), 6063 ಹಲ್ಲೆ ಪ್ರಕರಣ, 1144 ಡ್ರಗ್ಸ್ ಕೇಸ್, 7421 ಸೈಬರ್ ಕ್ರೈಂ, 2243 ವಂಚನೆ ಪ್ರಕರಣ, 450 ರಾಬರಿ ಹಾಗೂ 68 ಡಕಾಯಿತಿ ಪ್ರಕರಣ ದಾಖಲಾಗಿವೆ.
2023ರಲ್ಲಿ ಎಷ್ಟಿತ್ತು?
ವರದಿಯ ಪ್ರಕಾರ, ಕಳೆದ ವರ್ಷ 1295 ಕೊಲೆ ನಡೆದಿದ್ದವು. 609 ಅತ್ಯಾಚಾರ ಪ್ರಕರಣ, 17,439 ಹಲ್ಲೆ ಪ್ರಕರಣ, 3856 ಪೋಕ್ಸೋ ಪ್ರಕರಣ,6946 ಲೈಂಗಿಕ ದೌರ್ಜನ್ಯ, 6764 ಡ್ರಗ್ಸ್ ಪ್ರಕರಣ,21895 ಸೈಬರ್ ಪ್ರಕರಣಗಳು ದಾಖಲಾಗಿದ್ದವು.
ಬಿಜೆಪಿ-ಜೆಡಿಎಸ್ ಕಿಡಿ
ಕೇವಲ 4 ತಿಂಗಳಿಗೆ ರಾಜ್ಯದಲ್ಲಿ ಅಪರಾಧ ಪ್ರಕರಣ ದಾಖಲಾಗಿರುವುದು ಕಾನೂನು ಸುವ್ಯಸ್ಥೆ ಹದಗೆಟ್ಟಿರುವುದಕ್ಕೆ ಕೈಗನ್ನಡಿ ಎಂದು ಜೆಡಿಎಸ್ ಕಿಡಿಕಾರಿದೆ. " ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹೀಗಾಗಿ ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ? ಅಥವಾ ನಿದ್ದೆ ಮಾಡುತ್ತಿದೆಯಾ? ದಯಮಾಡಿ ಹೇಳುವಿರಾ ಎಂದು ಗೃಹಸಚಿವ ಪರಮೇಶ್ವರ್ಗೆ ಪ್ರಶ್ನಿಸಿದೆ.
Post a comment
Log in to write reviews