Samayanews.

Samayanews.

2024-12-24 12:24:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಟಿಎಸ್’ ಚಿತ್ರಕ್ಕೆ 5 ನಿರ್ದೇಶಕರು, 5 ಕಥೆಗಳು – ಹೊಸ ಪ್ರಯತ್ನಕ್ಕೆ ರಾಜ್ ಬಿ ಶೆಟ್ಟಿ ಸಾಥ್‌..!

ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾವನ್ನು ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದ್ರೆ ಐವರು ನಿರ್ದೇಶಕರು, ಐದು ಕಥೆಗಳನ್ನಿಟ್ಟುಕೊಂಡು 'ಬಿಟಿಎಸ್' ಎಂಬ ಸಿನಿಮಾ ಮಾಡಿದ್ದಾರೆ.

ಆಸಕ್ತಿಕರ ವಿಷಯಗಳನ್ನಿಟ್ಟುಕೊಂಡು ಜನರ ಮನಗೆಲ್ಲಲು ಮುಂದಾಗಿದ್ದಾರೆ‌. ಯುವ ಪ್ರತಿಭಾನ್ವಿತರ ತಂಡಕ್ಕೆ ನಟ ರಾಜ್ ಬಿ.ಶೆಟ್ಟಿ ಸಾಥ್ ನೀಡಿ, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಟ್ರೇಲರ್ ಅನ್ನು ಭೀಮ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಅನಾವರಣಗೊಳಿಸಿದ್ದಾರೆ.

ಬಿಟಿಎಸ್ (ಬಿಹೈಂಡ್ ದಿ ಸ್ಕ್ರೀನ್) ಚಿತ್ರವನ್ನು ಪ್ರಜ್ವಲ್​ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್.ಶಂಕದ್​, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ತೆರೆಯ ಹಿಂದಿನ ವಿಷಯಗಳನ್ನು ಐವರು ನಿರ್ದೇಶಕರು ತೆರೆಯ ಮೇಲೆ ತರುವ ಹೊಸ ಪ್ರಯತ್ನ ಮಾಡಿದ್ದಾರೆ. ಚಿತ್ರದ ಟ್ರೇಲರ್ ಚೆನ್ನಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ಹಾರೈಸಿದರು.

ಈ ವೇಳೆ ನಿರ್ದೇಶಕರಲ್ಲಿ ಒಬ್ಬರಾದ ಕುಲದೀಪ್ ಕಾರಿಯಪ್ಪ ಮಾತನಾಡಿ, ಜೀವನದಲ್ಲಿ ಸಾಧನೆಗೆ ಮುಂದಾದಾಗ ನಮ್ಮನ್ನು ಯಾರೂ ಬೆಂಬಲಿಸುವುದಿಲ್ಲ ಎಂದು ಸಮಾಜವನ್ನು ಬಯ್ಯುವುದಕ್ಕೆ ಮುಂದಾಗುತ್ತೇವೆ. ಸಾಧನೆ ಮಾಡಲು ಮುಂದಾದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದೇ ಕಥೆಯ ತಿರುಳು. ನನ್ನ ಕಥೆಯ ಹೆಸರು 'ಹೀರೋ'. ಅಪರೂಪದ ವಿಷಯಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ವಿವರ ನೀಡಿದರು.

ಮತ್ತೊಬ್ಬ ನಿರ್ದೇಶಕ ಸಾಯಿ ಶ್ರೀನಿಧಿ ಮಾತನಾಡಿ, ಸಾಲ ಮಾಡಿಯಾದರೂ ಚಿತ್ರ ಮಾಡಬೇಕು ಎನ್ನುವ ಆಸೆ ನನಗೆ. ನನ್ನ ಆಸೆಗೆ ನಿರ್ಮಾಪಕ ಮುರುಳಿ ಕೃಷ್ಣ ನೆರವಾದರು. ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ‌. ಕಾಫಿ, ಸಿಗರೆಟ್ ಮತ್ತು ಲೈನ್ ಎನ್ನುವುದು ನನ್ನ ಕಥೆಯ ಭಾಗ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ, ಐವರು ನಿರ್ದೇಶಕರ ಐದು ಕಥೆಗಳು ಸೇರಿ ಬಿಟಿಎಸ್ ಚಿತ್ರವಾಗಿದೆ. ಐದು ಮಂದಿ‌ ನಿರ್ದೇಶಕರೇ ಚಿತ್ರದ ಆಧಾರಸ್ತಂಭ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ವಿಜಯ್ ಕೃಷ್ಣ ಸೇರಿದಂತೆ ಮತ್ತಿತರು ಅಭಿನಯಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಮೇನಹಳ್ಳಿ ಜಗನ್ನಾಥ್, ವಿನಯ್ ಪ್ರೀತಂ, ಗುರುರಾಜ ಕುಲಕರ್ಣಿ, ಶ್ರೀಧರ್ ಶಿಕಾರಿಪುರ, ಜೈಶಂಕರ್,ದೇವನೂರು ಚಂದ್ರು, ಚೇತನ್ ಕೇಶವ್ ಇಸ್ಲಾವುದ್ದೀನ್ ಮುಂತಾದವರು ಗಣ್ಯರು ಉಪಸ್ಥಿತರಿದ್ದರು.

img
Author

Post a comment

No Reviews