ಕಲಬುರಗಿ; ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ ಪತಿ ಮನೆಯಲ್ಲಿ ಪತ್ತೆ ಆಗಿರುವಂತಹ ಘಟನೆ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.
ಅವರಾದ ಗ್ರಾಮದ ರಂಜಿತಾ(25) ಮೃತ ನವವಿವಾಹಿತೆ.ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಉಮೇಶ್ ಅವರನ್ನು 5 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದರು.ಇದೀಗಾ ರಂಜಿತ ಸಾವನಪ್ಪಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಮೃತ ರಂಜಿತಾ ಕುಟುಂಬ ಕಲಬುರಗಿಯ ಸ್ಟೇಷನ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದು ಸದ್ಯ ರಂಜಿತಾ ಪತಿ, ಅತ್ತೆ, ಮಾವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Post a comment
Log in to write reviews