Samayanews.

Samayanews.

2024-12-24 01:03:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

60 ವರ್ಷದ ಮಹಿಳೆಗೆ ಪ್ರಜ್ವಲ್​ನಿಂದ​ ಲೈಂಗಿಕ ದೌರ್ಜನ್ಯ: ಚಾರ್ಜ್​ ಶೀಟ್​ನಲ್ಲಿ ಉಲ್ಲೇಖ

ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ 113 ಸಾಕ್ಷಿಗಳನ್ನು ಒಳಗೊಂಡ 1632 ಪುಟಗಳ ಚಾರ್ಜ್​ಶೀಟ್ ಅನ್ನು ಸೋಮವಾರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ​ಸಲ್ಲಿಸಿದೆ.

ಹೊಳೆನರಸೀಪುರದಲ್ಲಿ 60 ವರ್ಷದ ಮನೆಕೆಲಸದಾಕೆಯ ಮೇಲೆ ಪ್ರಜ್ವಲ್​ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಎಸ್​ಐಟಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಸಂತ್ರಸ್ತೆಯನ್ನ ಹೆದರಿಸಿ ಹಲವು ಬಾರಿ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಧೃಡವಾಗಿದೆ.

ಕೃತ್ಯ ಎಸಗುವಾಗ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಮೊಬೈಲ್​ನಲ್ಲಿ ವಿಡಿಯೋ ಚಿತ್ರಿಕರಿಸಿದ್ದರು. ಸಂತ್ರಸ್ತೆ ಕೈಮುಗಿದು ನಿಮ್ಮ ತಾತ ಹಾಗೂ ತಂದೆಗೆ ಊಟ ಬಡಿಸಿದ್ದೇನೆ, ನನ್ನ ಬಿಟ್ಟು ಬಿಡು ಎಂದು ಸಂತ್ರಸ್ತೆ‌ ಅಂಗಲಾಚಿದರೂ ಬಿಡದ ಪ್ರಜ್ವಲ್​ ರೇವಣ್ಣ ದೌರ್ಜನ್ಯ ಎಸಗಿದ್ದಾರೆ ಎಂದು ಎಸ್​ಐಟಿ ಉಲ್ಲೇಖಿಸಿದೆ.

ಚಾರ್ಜ್​​ಶೀಟ್​​ನಲ್ಲಿ ಸಿಆರ್​ಪಿಸಿ 164 ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. 113 ಮಂದಿ ಸಾಕ್ಷಿದಾರರ ಹೇಳಿಕೆ, ಡಿಜಿಟಲ್ ಸಾಕ್ಷಿದಾರರ, ಎಫ್ಎಸ್ಎಲ್ ವರದಿ ಸಲ್ಲಿಕೆ ಮಾಡಲಾಗಿದೆ. ಪ್ರಜ್ವಲ್​ ರೇವಣ್ಣ ಒಟ್ಟು ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

 

img
Author

Post a comment

No Reviews