ಖಾಲಿ ಇರುವ 75,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು : ಎಂ.ಕೆ.ಸ್ಟಾಲೀನ್
ಚೆನೈ: ರಾಜ್ಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 75,000 ಹುದ್ದೆಗಳನ್ನು ಜನವರಿ 2026 ರೊಳಗೆ ಭರ್ತಿ ಮಾಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಂಗಳವಾರ (ಜೂನ್ 25) ಹೇಳಿದ್ದಾರೆ.
ವಿಧಾನಸಭೆ ನಿಯಮ 110ರ ಅಡಿಯಲ್ಲಿ ಹೇಳಿಕೆ ನೀಡಿದ ಸಿಎಂ ಸ್ಟಾಲಿನ್, ಇನ್ನು 18 ತಿಂಗಳೊಳಗೆ ಅಂದರೆ 2026ರ ಜನವರಿ ವೇಳೆಗೆ ತಮಿಳುನಾಡು ಲೋಕಸೇವಾ ಆಯೋಗದ ಮೂಲಕ 17,595 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಮತ್ತು ತಮಿಳುನಾಡು ಶಿಕ್ಷಕರ ನೇಮಕಾತಿ ಮಂಡಳಿಯ ಮೂಲಕ 19,260 ಶಿಕ್ಷಕರ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಅದೇ ರೀತಿ 3,041 ಹುದ್ದೆಗಳನ್ನು ವೈದ್ಯಕೀಯ ಸೇವೆಗಳ ನೇಮಕಾತಿ ಮಂಡಳಿಯ ಮೂಲಕ ಮತ್ತು 6,688 ಹುದ್ದೆಗಳನ್ನು ತಮಿಳುನಾಡು ಏಕರೂಪ ಸೇವೆಗಳ ನೇಮಕಾತಿ ಮಂಡಳಿಯ ಮೂಲಕ ಭರ್ತಿ ಮಾಡಲಾಗುವುದು. ಅಲ್ಲದೆ, ಸಮಾಜ ಕಲ್ಯಾಣ ಮತ್ತು ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಗಳಲ್ಲಿ ಖಾಲಿ ಇರುವ 30,219 ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು ಎಂದು ಸ್ಟಾಲಿನ್ ಹೇಳಿದರು.
ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಗುಣಮಟ್ಟದ ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತಮಿಳುನಾಡು ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಶಿಕ್ಷಣದ ಮೂಲಕ ನಾವು ಬೌದ್ಧಿಕ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
2021 ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 32,774 ಖಾಲಿ ಹುದ್ದೆಗಳನ್ನು ವಿವಿಧ ನೇಮಕಾತಿ ಏಜೆನ್ಸಿಗಳ ಮೂಲಕ ನೇಮಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 65,483 ಯುವಕರು ಸರ್ಕಾರಿ ಸೇವೆಗೆ ಸೇರಿದ್ದಾರೆ ಎಂದು ಸ್ಟಾಲಿನ್ ಹೇಳಿದರು.
Post a comment
Log in to write reviews