ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೇವಲ 10 ರೂಪಾಯಿಗೆ ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ (8 ಇಡ್ಲಿಗಳು) ಹಾಗೂ ಒಂದು ದಪ್ಪನೆಯ ಬೋಂಡಾ ಸಿಗುತ್ತದೆ. ಹೌದು, ನೀವು ಲೋ ಬಜೆಟ್‌ನಲ್ಲಿ ಹೊಟ್ಟೆ ತುಂಬಾ ರುಚಿಕರ ತಿಂಡಿ ತಿನ್ನಬೇಕೆಂದರೆ ಹೋಟೆಲ್‌ಗೊಮ್ಮೆ ಭೇಟಿ ಕೊಡಿ.
ಇದೇ ಸ್ವಾದ ಹಾಗೂ ಪ್ರಮಾಣದ ಇಡ್ಲಿ ತಿನ್ನಬೇಕೆಂದರೆ ಹೋಟೆಲುಗಳಲ್ಲಿ ಕನಿಷ್ಠ 100ರೂ ಆದರೂ ಬೇಕು. ಕಳೆದ 33 ವರ್ಷಗಳಿಂದಲೂ ಅದೇ ಜಾಗದಲ್ಲಿ ಇಡ್ಲಿ ಮಾಡುವ ಕಾಯಕದಲ್ಲಿ ಗತಿಸಿಹೋದ ತನ್ನ ಗಂಡನ ಕಾಣುತ್ತಿದ್ದಾರೆ. ಇವರ ಗಂಡ ದೊಡ್ಡಯ್ಯ 33 ವರ್ಷದ ಹಿಂದೆ ಇದೇ ಹೋಟೆಲಿನಲ್ಲಿ ಕೊನೆಯುಸಿರೆಳೆದರು. ಆಗ ಒಂದು ಇಡ್ಲಿ 50ಪೈಸೆ. ಈಗ 6-7 ವರ್ಷದಿಂದ ಈಚೆಗೆ ಇಡ್ಲಿ ಬೆಲೆ 1ರೂ. ಆಗಿದೆ.
ಬಂದು ದಿನಕ್ಕೆ 500 ಇಡ್ಲಿ, 100 ಬೋಂಡ ಮಾಡುತ್ತಾರೆ. ಅಲ್ಲಿಗೆ ರೂ.700 ಬರುತ್ತದೆ. ಅದರಲ್ಲಿ ಅಕ್ಕಿ, ಉದ್ದಿನ ಬೇಳೆ, ಕಾಯಿ, ಕಡಲೆಹಿಟ್ಟು, ಈರುಳ್ಳಿ, ಎಣ್ಣೆ, ಸಿಲಿಂಡರ್, ಖರ್ಚು ತೆಗೆದು ದಿನಕ್ಕೆ ಕೇವಲ 150 -200ರೂ ಉಳಿಯುತ್ತದೆ.
ಇಡ್ಲಿ ಬೆಲೆ 2ರೂ ಆದರೂ ಮಾಡಿ ಎಂದಾಗ, 'ಅಯ್ಯೋ 1ರೂಪಾಯೇ ಸಾಕು ಬನ್ರಪ್ಪ, ನಾನ್ ಬದ್ಕುಕೆ ಇಷ್ಟೇ ಸಾಕಲ್ವೆ' ಎನ್ನುತ್ತಾರೆ.. ಅವರ ಈ ಮಾತು ಕೇಳಿ ಒಂದು ನಿಮಿಷ ನಮ್ಮ ಜೀವನ ನಶ್ವರ ಎನಿಸಿಬಿಟ್ಟಿತು.
Post a comment
Log in to write reviews