ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ನಂಜನಗೂಡಲ ಗ್ರಾಮ ಪಂಚಯಿತಿ ವ್ಯಾಪ್ತಿಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ವತಿಯಿಂದ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಇದೀಗ ಪ್ರಯಾಣಿಕರಿಗೆ ಸಾವಿನ ಮನೆಯಂತಾಗಿದೆ.
ಕೇವಲ ಮಾರುದ್ದಕ್ಕೂ ಒಂದೊಂದು ದೊಡ್ಡ ದೊಡ್ಡ ಹೊಂಡ ಹಳ್ಳಗಳು ನಿರ್ಮಾಣವಾಗಿದ್ದು ಈ ರಸ್ತೆ ಎಷ್ಟರ ಮಟ್ಟಿಗೆ ಕಳಪೆ ಕಾಮಗಾರಿಯಾಗಿದೆ ಎಂದು ತೋರುತ್ತದೆ.
ತಾಲೂಕಿನ ನಂಜನಕೂಡಲ ಗ್ರಾಮದಿಂದ ದೊಡ್ಡೇ ಬೈಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಪ್ರಯಾಣಿಸುತ್ತಿದ್ದು, ಗ್ರಾಮದ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈ ಕುರಿತು ಸಾಮ್ರಾಟ್ ಟಿವಿ ವರದಿಗಾರರೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವ ಗ್ರಾಮಸ್ಥರು, ಮೊದಲು 55 ಲಕ್ಷ ರೂಪಾಯಿ ನಂತರ ಇದೇ ರಸ್ತೆಗೆ 28 ಲಕ್ಷ ರೂಪಾಯಿ ಹಣವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ವತಿಯಿಂದ ಮಂಜೂರಾಗಿದೆ. ಆದ್ರೆ ಇದರ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾದ ಕ್ರಮದಲ್ಲಿ ಕಾಮಗಾರಿ ಮಾಡದೇ ಕೇವಲ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡಿದ್ದಾರೆ. ಈ ಕಳಪೆ ಕಾಮಗಾರಿಯ ಪರಿಣಾಮ ವರ್ಷ ಕಳೆಯುವುದರೊಳಗೆ ರಸ್ತೆ ಉದ್ದಕ್ಕೂ ಹೊಂಡ-ಗುಂಡಿಗಳು ಮೂಡಿದ್ದು, ಮಳೆಗಾಲದಲ್ಲಿ ನೀರು ತುಂಬಿ, ವಾಹನ ಸವಾರರಿಗೆ ಗುಂಡಿಗಳು ಅರಿವಿಗೆ ಬಾರದೇ, ಅನೇಕ ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸುತ್ತಿವೆ. ಕೂಡಲೇ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Post a comment
Log in to write reviews