94 ನೇ ಜನ್ಮದಿನದಂದು ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸಿಕೊಂಡ ಡಾ.ಮಹಾಂತ ಶ್ರೀಗಳು
ಬಾಗಲಕೋಟೆ: ಚಿತ್ತರಗಿ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಡಾ.ಮಹಾಂತ ಸ್ವಾಮಿಗಳ 94 ನೇ ಜನ್ಮ ದಿನವನ್ನು ಆಗಷ್ಟ 1 ರಂದು ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ಲಿನಲ್ಲಿ ಬಹಳ ವೈಭವಪೂರ್ಣವಾಗಿ ಆಚರಿಸಲಾಯಿತು.
ಜೊತೆಗೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ಕಾರದ ಆದೇಶದನ್ವಯ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವಿಜಯ ಮಹಾಂತೇಶ ಸಂಸ್ಥಾನ ಮಠದ ಅಡಿಯಲ್ಲಿ ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.
ಪೂಜ್ಯ ಡಾ. ಮಹಾಂತಶ್ರೀಗಳ ಆಶಯದಂತೆ ಭಕ್ತರಿಂದ ನನಗೆ ಯಾವದೇ ದುಡ್ಡು ದುಗ್ಗಾಣಿ ಬೇಡ ಜನರಲ್ಲಿರುವ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿದರೆ ಸಾಕು ಎಂಬ ವೇದವಾಕ್ಯದಿಂದ ನಿರಂತರವಾಗಿ 45 ವರ್ಷಗಳ ಕಾಲ ಭಕ್ತರ ಮನೆಮನೆಗೆ ಹೋಗಿ ಅವರ ಮನವನ್ನು ಪರಿವರ್ತನೆ ಗೊಳಿಸಿ ವಿಶಿಷ್ಟ ರೀತಿಯ ಬಿಕ್ಷೆ ಪಡೆದ ಶ್ರೀಗಳಿಗೆ ಪ್ರತಿಷ್ಟಿತ ಸಂಯಮ ಪ್ರಶಸ್ತಿ ನೀಡಿ ಅವರ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದಲೇ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಕಡಪಟ್ಟಿಯವರ ಮುಂದಾಳತ್ವದಲ್ಲಿ ರಕ್ತದಾನ ಶಿಬಿರ ನಡೆದುಕೊಂಡು ಬರುತ್ತಲಿದೆ. ಇಂದಿನ ಸಭೆಯಲ್ಲಿ ಪೂಜ್ಯ ಗುರು ಮಹಾಂತ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿ ಮನುಷ್ಯರು ರಕ್ತದ ಮಹತ್ವವನ್ನರಿತು ರಕ್ತ ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಅದರ ಜೊತೆ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಶ್ರೀ ಬಾಳಾಸಾಹೇಬ ವಡವಡೆಯವರು ಇಂದಿನ ಯುವಕರು ವ್ಯಸನಗಳ ದಾಸರಾಗುತ್ತಿರುವದನ್ನು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಈ ವಿಚಾರದಲ್ಲಿ ಸಮಾಜದ ಜೊತೆ ಪಾಲಕರು ಕೈ ಜೋಡಿಸಲು ವಿನಂತಿಸಿಕೊಂಡರು ಮುಖ್ಯ ಅತಿಥಿಗಳಾಗಿ ಡಾ. ಸುನೀಲ ಭೈರಗೊಂಡ ಡಾ. ಮಹಾಲಿಂಗಪ್ಪ ಗೊಂಗಡಶೆಟ್ಟಿ, ಶಿವಾನಂದ ಕಂಠಿ ,ಮಹಾಂತೇಶ ಅವಾರಿ ಉಪಸ್ಥಿತರಿದ್ದರು. ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವ್ಯಸನ ಮುಕ್ತ ಜಾಗೃತಿ ಅಭಿಯಾನ ಮಾಡಿದರು
Post a comment
Log in to write reviews