Samayanews.

Samayanews.

2024-12-24 12:58:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಸ್ರೇಲ್ - ಹಮಾಸ್ ಯುದ್ಧದ ವೇಳೆ ಜನಿಸಿದ 10 ತಿಂಗಳ ಗಂಡು ಮಗುವಿಗೆ ಪೋಲಿಯೋ ದೃಢ

ಗಾಜಾ ನಗರ: ವಿನಾಶಕಾರಿ ಇಸ್ರೇಲ್ - ಹಮಾಸ್ ಯುದ್ಧದ ಸಂದರ್ಭದಲ್ಲಿ ಜನಿಸಿದ್ಧ 10 ತಿಂಗಳ ಗಂಡು ಮಗುವಿಗೆ ಪೋಲಿಯೊ ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 25 ವರ್ಷಗಳಲ್ಲಿ ಗಾಜಾದಲ್ಲಿ ಇದು ಮೊದಲ ಪ್ರಕರಣ ಇದಾಗಿದೆ.

ಅಬ್ದೆಲ್ - ರಹಮಾನ್ ಎಂಬ ಮಗುವಿಗೆ ಇದ್ದಕ್ಕಿದ್ದಂತೆಯೇ ಕಾಲಿನಲ್ಲಿ ಪಾರ್ಶ್ವವಾಯು ಉಂಟಾಗಿ ಮಗು ತೆವಳುವುದನ್ನೇ ನಿಲ್ಲಿಸಿದೆ. ಮಗುವಿನ ತಾಯಿ ನನ್ನ ಮಗು ಆರೋಗ್ಯಯುತವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಮಗು ತೆವಳುವುದು, ಕೂರುವುದು, ಚಲಿಸುವುದನ್ನು ನಿಲ್ಲಿಸಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಗಾಜಾದಲ್ಲಿ ತಿಂಗಳುಗಳಿಂದ ಆರೋಗ್ಯ ಕಾರ್ಯಕರ್ತರು ಪೋಲಿಯೋದ ಏಕಾಏಕಿ ಸಂಭವನೀಯತೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಇಸ್ರೇಲ್​ - ಹಮಾಸ್​ ಯುದ್ಧಕ್ಕಿಂತ ಮೊದಲೇ ಗಾಜಾದ ಮಕ್ಕಳಿಗೆ ಹೆಚ್ಚಾಗಿ ಪೋಲಿಯೋ ವಿರುದ್ಧ ಲಸಿಕೆ ನೀಡಲಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಈ ಮಗುವಿಗೆ ಲಸಿಕೆ ನೀಡಲಾಗಿಲ್ಲ. ಏಕೆಂದರೆ ಆ ಮಗು ಅಕ್ಟೋಬರ್ 7ರ ಮೊದಲು ಜನಿಸಿದೆ. ಆ ಸಂದರ್ಭದಲ್ಲಿ ಹಮಾಸ್​ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಇದರ ಪ್ರತೀಕಾರಕ್ಕೆ ಇಸ್ರೇಲ್​ ಗಾಜಾದ ಮೇಲೆ ಆಕ್ರಮಣ ಮಾಡಿತು. ಈ ದಾಳಿಯಲ್ಲಿ ಆಸ್ಪತ್ರೆಗಳಿಗೆ ಹಾನಿಯಾದವು. ಹೀಗಾಗಿ ನವಜಾತ ಶಿಶುಗಳಿಗೆ ನಿಯಮಿತ ವ್ಯಾಕ್ಸಿನೇಷನ್ ನೀಡಲು ಸಾಧ್ಯವಾಗದೇ ನಿಲ್ಲಿಸಲಾಯಿತು.

ಪೋಲಿಯೋ ಒಮ್ಮೆ ಬಂದ ಮೇಲೆ ಚಿಕಿತ್ಸೆ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋದಿಂದ ಪಾರ್ಶ್ವವಾಯುವಿಗೆ ಒಳಗಾದ ಪ್ರಕರಣದಲ್ಲಿ ಸೋಂಕಿಗೆ ಒಳಗಾದ ನೂರಾರು ಜನರಿಗೆ ರೋಗಲಕ್ಷಣಗಳು ಕಾಣಿಸುವುದಿಲ್ಲ ಎಂದು ತಿಳಿಸಿದೆ. ರೋಗಕ್ಕೆ ತುತ್ತಾಗುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಪೋಲಿಯೋ ಒಂದು ಬಾರಿ ಕಾಣಿಸಿಕೊಂಡರೆ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಪೋಲಿಯೋ ಪಾರ್ಶ್ವವಾಯು ಉಂಟುಮಾಡಿದರೆ ಅದು ಶಾಶ್ವತ ರೋಗವಾಗಿ ಕಾಡುತ್ತದೆ. ಪಾರ್ಶ್ವವಾಯುವಿನಿಂದ ಉಸಿರಾಟದ ಮೇಲೆ ಪರಿಣಾಮ ಬೀರಿದರೆ ಪ್ರಾಣಕ್ಕೂ ಮಾರಕವಾಗಬಹುದು.

ವಾಕ್ಸಿನೇಷನ್ಕಾರ್ಯಕ್ರಮ ಆರಂಭಿಸಿದ ವಿಶ್ವಸಂಸ್ಥೆ: ಗಾಜಾದಲ್ಲಿ ಉಳಿದವರಂತೆ ಪೋಲಿಯೋ ಪೀಡಿತ ಮಗುವಿನ ಕುಟುಂಬವು ಕಿಕ್ಕಿರಿದ ಟೆಂಟ್ ಕ್ಯಾಂಪ್‌ನಲ್ಲಿ ವಾಸಿಸುತ್ತಿವೆ. ಟೆಂಟ್​ ಸುತ್ತಮುತ್ತ ಕಸದ ರಾಶಿಗಳು, ಬೀದಿಗಳಲ್ಲಿ ಕೊಳಕು ತ್ಯಾಜ್ಯದ ನೀರು ಹರಿಯುತ್ತಿದೆ. ಪ್ರಾಣಿ, ಕ್ರಿಮಿಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಪೋಲಿಯೋದಂತಹ ರೋಗಗಳಿಗೆ ಇವುಗಳು ಕಾರಣವಾಗುತ್ತದೆ. ಇದು ಮಲ ವಸ್ತುವಿನ ಮೂಲಕ ಹರಡುತ್ತದೆ ಎಂದು ಇಲ್ಲಿನ ಆರೋಗ್ಯ ಕಾರ್ಯಕರ್ತರು ವಿವರಿಸಿದ್ದಾರೆ. ಸದ್ಯ ಇವೆಲ್ಲ ಕಾರಣದಿಂದ ಪೋಲಿಯೋ ಹರಡುವಿಕೆಯನ್ನು ತಡೆಗಟ್ಟಲು, ಇತರ ಕುಟುಂಬಗಳನ್ನು ರಕ್ಷಿಸಲು ವ್ಯಾಕ್ಸಿನೇಷನ್​ ಅಭಿಯಾನವನ್ನು ಪ್ರಾರಂಭಿಸುವ ಯೋಜನೆಗಳನ್ನು ವಿಶ್ವಸಂಸ್ಥೆ ಅನಾವರಣಗೊಳಿಸಿದೆ.

ಗಾಜಾ ಸ್ಟ್ರಿಪ್‌ನಲ್ಲಿ ಪಾರ್ಶ್ವವಾಯು ಹೊಂದಿರುವ ಕನಿಷ್ಠ ಇಬ್ಬರು ಮಕ್ಕಳಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಕ್ಕಳ ಪರೀಕ್ಷೆಯ ಮಾದರಿಗಳನ್ನು ಜೋರ್ಡಾನ್‌ನಲ್ಲಿರುವ ಲ್ಯಾಬ್‌ಗೆ ಕಳುಹಿಸಲಾಗಿದೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಾಜಾದ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕಲು, ಕದನ ವಿರಾಮದ ಅಗತ್ಯವಿದೆ. ಆರೋಗ್ಯ ಏಜೆನ್ಸಿಗಳು ಯುದ್ಧ ವಿರಾಮವನ್ನು ಬಯಸುತ್ತಿವೆ.

ಕದನದಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾವಿರಾರು ಪ್ಯಾಲೇಸ್ಟಿನಿಯನ್ ಕುಟುಂಬಗಳು ಪಲಾಯನ ಮಾಡುತ್ತಿವೆ. ಆರೋಗ್ಯ ಕಾರ್ಯಕರ್ತರು ತಲುಪಲು ಕಷ್ಟಕರವಾದ ಗಾಜಾದ ಪ್ರದೇಶಗಳಲ್ಲಿ ಅನೇಕ ಮಕ್ಕಳು ವಾಸಿಸುತ್ತಿದ್ದಾರೆ. ಈಗ ಪೋಲಿಯೋಗೆ ವಿರಾಮ ಹೇಳಬೇಕಾದರೆ ಕದನಕ್ಕೆ ವಿರಾಮ ಹೇಳದೇ ಅನ್ಯ ಮಾರ್ಗವಿಲ್ಲ ಎಂದು ಯುನಿಸೆಫ್ ವಕ್ತಾರ ಅಮ್ಮರ್ ಅಮ್ಮಾರ್ ಹೇಳಿದ್ದಾರೆ.

6,40,000 ಕ್ಕಿಂತ ಹೆಚ್ಚು ಮಕ್ಕಳಲ್ಲಿ ಕನಿಷ್ಠ ಶೇ 95 ರಷ್ಟು ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ವಿಶ್ವಸಂಸ್ಥೆ ಹೊಂದಿದೆ. ಈಗಾಗಲೇ 1.2 ಮಿಲಿಯನ್ ಡೋಸ್ ಲಸಿಕೆಗಳು ಗಾಜಾಕ್ಕೆ ಬಂದಿದ್ದು, ಮುಂಬರುವ ವಾರಗಳಲ್ಲಿ 400,000 ಡೋಸ್‌ಗಳು ಬರಲಿವೆ ಎಂದು ಯುನಿಸೆಫ್ ತಿಳಿಸಿದೆ. ಜತೆಗೆ ನಾಗರಿಕ ವ್ಯವಹಾರಗಳ ಉಸ್ತುವಾರಿ ಇಸ್ರೇಲ್‌ನ ಮಿಲಿಟರಿ ಸಂಸ್ಥೆ COGAT, 'ಭಾನುವಾರ ಕೆರೆಮ್ ಶಾಲೋಮ್ ಕ್ರಾಸಿಂಗ್ ಮೂಲಕ 25,000 ಲಸಿಕೆಗಳನ್ನು ಸಾಗಿಸುವ ಯುಎನ್ ಟ್ರಕ್‌ಗಳಿಗೆ ಅನುಮತಿ ನೀಡಿದೆ' ಎಂದು ಹೇಳಿದೆ.

ಮಕ್ಕಳಿಗೆ ಈ ಕೂಡಲೇ ಲಸಿಕೆ ಹಾಕದಿದ್ದರೆ ಗಾಜಾದಲ್ಲಿರುವ ಮಕ್ಕಳಿಗೆ ಮಾತ್ರವಲ್ಲದೇ ನೆರೆಯ ದೇಶಗಳು ಮತ್ತು ಪ್ರದೇಶದ ಗಡಿ ಉದ್ದಕ್ಕೂ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂಬ ಕಳವಳವನ್ನು ಯುನಿಸೆಫ್ ವಕ್ತಾರರು ವ್ಯಕ್ತಪಡಿಸಿದ್ದಾರೆ.

img
Author

Post a comment

No Reviews