ಪ್ಯಾರಿಸ್: ಇಲ್ಲಿನ ಸ್ಟೇಡ್ ಡೇ ಫ್ರಾನ್ಸ್ ನಲ್ಲಿ ಹದಿನೇಳು ದಿನಗಳಿಂದ ನಡೆಯುತ್ತಿದ್ದ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿತು. ಸ್ನೂಪ್ ಡಾಗ್, ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್ ಮತ್ತು ಬಿಲ್ಲೀ ಎಲ್ಲೀಶ್ ಸೇರಿದಂತೆ ಹಲವು ವಿಶ್ವವಿಖ್ಯಾತ ಸಂಗೀತ ತಂಡಗಳು ಮುಕ್ತಾಯ ಕಾರ್ಯಕ್ರಮದಲ್ಲಿ ಆಕರ್ಷಕ ಪ್ರದರ್ಶನ ನೀಡಿದವು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವು ಒಟ್ಟು 6 ಪದಕಗಳನ್ನು ಗೆದ್ದುಕೊಂಡಿದೆ. ಈ ಆರು ಪದಕಗಳಲ್ಲಿ ಮೂರು ಮೆಡಲ್ ಮೂಡಿಬಂದಿರುವುದು ಶೂಟಿಂಗ್ ಸ್ಪರ್ಧೆಯಲ್ಲಿ ಎಂಬುದು ವಿಶೇಷ. ಅದರಲ್ಲೂ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಯುವ ಮಹಿಳಾ ಶೂಟರ್ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜುಲೈ 26 ರಂದು ಶುರುವಾದ 33ನೇ ಬೇಸಿಗೆ ಒಲಿಂಪಿಕ್ಸ್ಗೆ ಭಾನುವಾರ ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ತೆರೆಬಿದ್ದಿದೆ. ಪ್ಯಾರಿಸ್‌ನ ಸ್ಟೇಡ್ ಡೆ ಫ್ರಾನ್ಸ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದ ನಂತರ, 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಲಾಸ್ ಏಜಂಲೀಸ್ಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಲಾಯಿತು. ಈ ಭವ್ಯವಾದ ಕಾರ್ಯಕ್ರಮವನ್ನು ಮಾನವೀಯತೆಯ ಆಚರಣೆ ಎಂದು ಕರೆಯಲಾಗಿರುವುದು ವಿಶೇಷ. ಇನ್ನು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 9000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಹಾಗೆಯೇ ಅವರನ್ನು 270 ಪ್ರದರ್ಶಕರು ಮತ್ತು ಕಲಾವಿದರು ರಂಜಿಸಿರುವುದು ವಿಶೇಷ.
ಪ್ಯಾರಿಸ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ ಮತ್ತು ಕಂಚು ಗೆದ್ದ ಫ್ರೆಂಚ್ ಈಜು ಸೆನ್ಸೇಷನ್ ಲಿಯಾನ್ ಮಾರ್ಚಂಡ್, ಕೌಲ್ಡ್ರನ್ ಅನ್ನು ನಂದಿಸಿ ಮತ್ತು ಒಲಿಂಪಿಕ್ ಜ್ವಾಲೆಯೊಂದಿಗೆ ಲ್ಯಾಂಟರ್ನ್ ಅನ್ನು ಕ್ರೀಡಾಂಗಣಕ್ಕೆ ಒಯ್ಯುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಫ್ರೆಂಚ್ ರಗ್ಬಿ ತಾರೆ ಆಂಟೊಯಿನ್ ಡುಪಾಂಟ್ ನೇತೃತ್ವದ 205 ದೇಶಗಳ ಪ್ರತಿ ಧ್ವಜಧಾರಿಗಳು ಪರೇಡ್ ಆಫ್ ದಿ ನೇಷನ್ನಲ್ಲಿ ಭಾಗವಹಿಸಿದ್ದರು.
Post a comment
Log in to write reviews