Samayanews.

Samayanews.

2024-12-24 12:21:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಣರಂಗವಾದ ಮನೆ; ಲಾಯರ್ ಜಗದೀಶ್ ಮೇಲೆ ಕೆಲ ಸ್ಪರ್ಧಿಗಳು ಗರಂ

ಬಿಗ್ ಬಾಸ್ ಸೀಸನ್ 11ರ ಈಗಾಗಲೇ 2 ವಾರಗಳನ್ನು ಮುಗಿಸಿದ್ದು 3ನೇ ವಾರಕ್ಕೆ ಕಾಲಿಟ್ಟಿದೆ. ಸೀಸನ್ 11ರ ಸ್ಪರ್ಧಿಗಳು ಮಾತಿನ ಯುದ್ಧದಲ್ಲಿ ಗೆಲ್ಲೋ ಪಣತೊಟ್ಟಿದ್ದಾರೆ. ಬಿಗ್​ಬಾಸ್ ಸೀಸನ್​ 11 ಯಶಸ್ವಿಯಾಗಿ ನಡೆಯುತ್ತಿದ್ದು, ಬಿಗ್‌ ಬಾಸ್‌ ಮನೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಒಬ್ಬರ ನಡುವೆ ಒಬ್ಬರು ಕಿತ್ತಾಡುತ್ತಿದ್ದು, ವಾದ ವಿವಾದಗಳು ಕೂಡ ಅತಿರೇಕಕ್ಕೆ ಹೋಗಿವೆ. 
ಸದ್ಯಕ್ಕೆ ಮನೆ ರಣರಂಗವಾಗಿದ್ದು,​ ಜಗದೀಶ್ ವಿರುದ್ಧ ಕೆಲ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಈ ವೇಳೆ ಒಬ್ಬರನೊಬ್ಬರು ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು  ಇತಿ-ಮಿತಿ ಎಲ್ಲವನ್ನೂ ಮರೆತು ಕಿತ್ತಾಡುತ್ತಿದ್ದಾರೆ.   
ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್​ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ. 
ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್​ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ. ಎಂದು ಜಗದೀಶ್​ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್​ ಟು ಫೇಸ್ ಇದ್ದರು. ಇದೇ ವೇಳೆ ಬಿಗ್ ಬಾಸ್ ಎಂಟ್ರಿಯಾಗಿದ್ದು, ಬಿಗ್ಈ‌ ಬಾಸ್‌ ಸುಮ್ಮನಿರಿ ಎಂದರು ಬಿಗ್‌ ಬಾಸ್‌ ಸ್ಪರ್ಧಿಗಳು ಕಿತ್ತಾಡುತ್ತಿದ್ದರು. ಆಗ ಬಿಗ್‌ಬಾಸ್‌ ಕೂಡಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. 
 

img
Author

Post a comment

No Reviews