ಬಾಗಲಕೋಟೆ : ಘಟಪ್ರಭಾ ನದಿಗೆ ನೀರಿನ ಹರಿವು ಹೆಚ್ಚಾದ ಕಾರಣ ಬೃಹತ್ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು, ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ. ಮಹಾಂತೇಶ್ ಕೆಂಚಪ್ಪಗೋಳ ಎಂಬವರ ಗಾಳಕ್ಕೆ ಬೃಹತ್ ಗಾತ್ರದ ಮೀನು ಬಿದ್ದಿದೆ.
ಮಾಚಕನೂರು ಗ್ರಾಮದ ಬಳಿ ಹಾದು ಹೋಗಿರುವ ಘಟಪ್ರಭಾ ನದಿಯಲ್ಲಿ ಮಹಾಂತೇಶ್ ಬಲೆ ಹಾಕಿದ್ದರು. ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಮೀನುಗಳನ್ನು ಸೆರೆ ಹಿಡಿಯಲು ಬಲೆ ಹಾಕಿದ್ದರು. ಈ ವೇಳೆ 30 ಕೆಜಿ ತೂಕದ ಬೃಹತ್ ಗಾತ್ರದ ಮೀನು ಮಹಾಂತೇಶ್ ಅವರ ಬಲೆಗೆ ಸಿಕ್ಕಿದ್ದು, ಮೀನುಗಾರರಲ್ಲಿ ಸಂಭ್ರಮ ಮನೆಮಾಡಿದೆ.
ಇನ್ನು ಕಳೆದ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುತ್ತಿದ್ದ ಘಟಪ್ರಭಾ ನದಿ ಈಗ ಜೀವಕಳೆ ಪಡೆದುಕೊಂಡಿದೆ. ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿದ್ದು ಘಟಪ್ರಭಾ ನದಿಯ ಒಡಲು ತುಂಬಿದೆ. ಕೃಷಿ ಚಟುವಟಿಕೆಗಳು ಕೂಡ ಭರ್ಜರಿಯಾಗಿ ನಡೆದಿವೆ. ರೈತರು, ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Post a comment
Log in to write reviews