ವರ್ಷಕ್ಕೊಮ್ಮೆ ತೆರೆಯಲ್ಪಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ 2 ದಿನವಾದ ಇಂದು ಕೂಡ ಜನ ಸಾಗರವೇ ಹರಿದು ಬಂದಿದೆ. ಹಿರಿಯರು, ವಯೋವೃದ್ಧರು, ಕುಟುಂಬಸ್ಥರು, ಯುವಕ ಯುವತಿಯರು ಮತ್ತು ಮಕ್ಕಳನ್ನು ಹೊತ್ತ ತಂದೆ ತಾಯಿಗಳು ಸರತಿ ಸಾಲಲ್ಲಿ ನಿಂತು ಮುಂದೆ ಸಾಗುತ್ತಿದ್ದಾರೆ. ಇನ್ನೂ ಇಂದು ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿ ಹೆಚ್ಚಾಗಿದೆ. ಸಾವಿರ ರೂ., ಮುನ್ನೂರು ರೂ. ಪಾವತಿಸಿದರೆ ವಿಶೇಷ ದರ್ಶನವಿದ್ದು, ಈ ಸಾಲಿನಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದಾರೆ.
ವರ್ಷಕ್ಕೊಮ್ಮೆ ದರ್ಶನ ಕರುಣಿಸುವ. ರಾಜಮಾತೆ ಪ್ರಮೋದಾದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ, ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ, ಸಿನಿತಾರೆಯರಾದ ವಶಿಷ್ಟ ಹಾಗೂ ಹರಿಪ್ರಿಯ ಸೇರಿ ಹಲವು ಗಣ್ಯರು ಸೇರಿ ಸಾವಿರ ಸಾವಿರ ಜನರು ದೇವಿ ದರ್ಶನ ಮಾಡಿದರು.
ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ, ದೇವಿಗೆ ಅಲಂಕಾರ ಮತ್ತು ನೈವೇದ್ಯ, ಪೂಜೆಗಳ ಬಳಿಕ ಶುಕ್ರವಾರ ಮುಂಜಾನೆ 4 ಗಂಟೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪಾವನರಾದರು.
Post a comment
Log in to write reviews