ಚಿಕ್ಕಮಗಳೂರು : ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಬೆಂಗಳೂರು ಮೂಲದ ಪೊಲೀಸ್ ಪೇದೆ ಮೇಲೆ ದೇಗುಲದ ಮುಂಭಾಗದಲ್ಲೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪೇದೆ ರಾಜೇಗೌಡ ಕುಟುಂಬದೊಂದಿಗೆ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದರು. ಕಳೆದ ರಾತ್ರಿ ಅಣ್ಣ-ಅತ್ತಿಗೆ ಉಳಿಯಲು ವಸತಿಗೃಹವೊಂದರಲ್ಲಿ ರೂಮ್ ಕೇಳಲು ಹೋಗಿದ್ದರು. ಆ ವೇಳೆ ಶೃಂಗೇರಿ ಮೂಲದ ಸ್ಪರ್ಶಿತ್ ಎಂಬಾತ ಏಕಾ ಏಕಿ ರಾಜೇಗೌಡನ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ವೇಳೆ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ದೇವಾಲಯದ ಮುಂಭಾಗವಿದ್ದ ಮತ್ತಿಬ್ಬರು ಸ್ಪರ್ಶಿತ್ ಜೊತೆ ಸೇರಿ ಗಲಾಟೆ ಮಾಡಿದ್ದಾರೆ ಅಲ್ಲದೆ ದೇವಸ್ಥಾನದ ಮುಂಭಾಗ ಇದ್ದ ಅವರ ಕಾರನ್ನ ತೆಗೆಯುವಂತೆ ಖ್ಯಾತೆ ತೆಗೆದಿದ್ದಾರೆ.
ಈ ವೇಳೆ ಗಲಾಟೆ ಜೋರಾಗಿ ಕಬ್ಬಿಣದ ರಾಡ್‌ನಿಂದ ಪೇದೆ ರಾಜೇಗೌಡ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ, ಗಲಾಟೆ ಬಿಡಿಸಲು ಬಂದ ರಾಜೇಗೌಡನ ಅಣ್ಣ ಉಮೇಶ್ ಮೇಲೂ ಹಲ್ಲೆ ನಡೆಸಿದ್ದಾರೆ. ರಾಜೇಗೌಡ ಹಾಗೂ ಉಮೇಶ್ ಇಬ್ಬರ ಕೈಗೂ ಗಂಭೀರ ಗಾಯಗಳಾಗಿದ್ದು, ಎಲ್ಲರಿಗು ಕೊಲೆ ಮಾಡುವುದಾಗಿ ಸ್ಪರ್ಶಿತ್ ಮತ್ತು ಸಹಚರರು ಬೆದರಿಕೆ ಹಾಕಿದ್ದಾರೆ.
ಅಪರಿಚಿತ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪೇದೆಯಾಗಿರುವ ರಾಜೇಗೌಡ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಲ್ಲೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment
Log in to write reviews