ಒಂದೇ ಒಂದು ಅಂಕ ಕಡಿಮೆಯಾಗಿದ್ದಕ್ಕೆ ಮರುಮೌಲ್ಯಮಾಪನ ಮೊರೆ ಹೋದ ವಿದ್ಯಾರ್ಥಿನಿ
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಗಲಕೋಟೆಯ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಆದರೆ, 624 ಅಂಕ ಪಡೆದ 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಆದರೆ, ಈ ಪೈಕಿ 624 ಅಂಕ ಪಡೆದ ಬೆಂಗಳೂರಿನ ಮೇಧಾ ಶೆಟ್ಟಿ ನನಗೆ ಸಂಸ್ಕೃತ ವಿಷಯದಲ್ಲಿ ಒಂದು ಅಂಕ ಕಡಿಮೆಯಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ ಎಂದು ತಿಳಿಸಿದ್ದಾಳೆ.
ಬೆಂಗಳೂರಿನ ಬನಶಂಕರಿಯಲ್ಲಿರುವ ಹೋಲಿ ಚೈಲ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮೇಧಾ ಶೆಟ್ಟಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಮತ್ತು ಮನೆಯವರು ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.
ಜೊತೆಗೆ, ವಿದ್ಯಾರ್ಥಿನಿಗೆ ಶುಭಾಶಯ ಕೋರಿದ್ದಾರೆ. ಆದರೆ, ವಿದ್ಯಾರ್ಥಿನಿ ಮಾತ್ರ ಇದರಿಂದ ಸಂತಸಗೊಂಡಿಲ್ಲ. ತಾನು ರಾಜ್ಯಕ್ಕೆ ಟಾಪರ್ ಆಗಬೇಕಿತ್ತು. ನನಗೆ 624 ಅಂಕಗಳು ಬರುವ ಮೂಲಕ ಒಂದು ಅಂಕ ಕಡಿಮೆಯಾಗಿ ದ್ವಿತೋಯ ರ್ಯಾಂಕ್ ಪಡೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
Tags:
- India News
- Kannada News
- sslc exam 2024 result
- sslc 2024 result 2024
- 10ನೇ ತರಗತಿ ಫಲಿತಾಂಶ 2024
- sslc exam 2024 karnataka
- ssp scholarship 2023-24
- sslc exam result 2024 date
- sslc result 2024 annouced
- sslc passing package 2024
- sslc maths answer key 2024
- sslc result 2024 announced
- sslc 2024 result announced
- sslc model question paer 2024
Post a comment
Log in to write reviews