ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕ ಕಾರಿನ ಗ್ಲಾಸ್ ಒಡೆದು ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ.
ಕೃತ್ಯ ಎಸಗಿದ ಆರೋಪಿ ನವೀನ್ ರೆಡ್ಡಿ ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ ಒಳಗಿದ್ದವರು ಕಿರುಚಾಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕ ಹೇಳಿದರೂ, ಕೇಳದ ಯುವಕ ಗಲಾಟೆ ಮುಂದುವರೆಸಿದ್ದಾನೆ. ಈ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನ ಪುಂಡಾಟವನ್ನು ಕಾರಿನಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಲಾತಣಾದಲ್ಲಿ ಸಿಟಿಜನ್ಸ್ ಮೂಮೆಂಟ್ ಈಸ್ಟ್ ಬೆಂಗಳೂರು ಎಂಬ ಹೆಸರಿನ ಖಾತೆ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಯುವಕ ಗಾಜು ಒಡೆಯುವುದು ಮತ್ತು ಕಾರಿನಲ್ಲಿದ್ದ ಕುಟುಂಬ ಕಿರುಚಾಡಿದ್ದನ್ನು ಕಾಣಬಹುದು. ಕಾರು ಚಾಲಕ “ಕಾರು ಚಾಲ ಒಂದು ಸೆಕೆಂಡ್ನಿಲ್ಲು, ಹೀಗೆಲ್ಲ ಮಾಡಬೇಡ. ಕಾರಿನಲ್ಲಿ ಮಗು ಇದೆ” ಎಂದು ಹೇಳಿದರೂ ಯುವಕ ಮಾತು ಕೇಳದೆ ತನ್ನ ಅಟ್ಟಹಾಸ ಮುಂದುವರೆಸಿದ್ದಾನೆ.
ಸ್ಥಳೀಯರು ಯುವಕನನ್ನು ತಡೆಯಲು ಯತ್ನಿಸಿದರೂ ಮಾತು ಕೇಳದೆ, ತನ್ನ ದರ್ಪ ತೋರಿಸಿದ್ದಾನೆ. ಟ್ವೀಟ್ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ.532/2024 ಕಲಂ.126(2),324(4),351(2), r/w34 ಅಡಿಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಎಂದು ತಿಳಿದು ಬಂದಿದೆ.
Post a comment
Log in to write reviews