ಬೆಂಗಳೂರು: ಉತ್ತರಭಾರತ ಮೂಲದ ಯುವತಿಯೊಬ್ಬಳು ರಾಜ್ಯ ರಾಜಧಾನಿ ಬಗ್ಗೆ ನಾಲಗೆ ಹರಿ ಬಿಟ್ಟಿದ್ದಾಳೆ. ನಾವು ಇಲ್ಲಾಂದ್ರೆ ಬೆಂಗಳೂರು ಖಾಲಿ ಆಗುತ್ತೆ ಅಂತಾ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಬಡಬಡಿಸಿದ್ದಾಳೆ. ದಸುಗಂಧ್ ಶರ್ಮಾ ಅನ್ನೋ ಇನ್ಸ್ಸ್ಟಾ ಪೇಜ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ಬೆಂಗಳೂರು, ಸಿಲಿಕಾನ್ ಸಿಟಿಯ ಜನರ ಬಗ್ಗೆ ಕೀಳಾಗಿ ಮಾತನಾಡಿದ್ದಾಳೆ.
ʻನಾವು ಉತ್ತರ ಭಾರತದವರು ಇಲ್ಲಾಂದ್ರೆ ಬೆಂಗಳೂರು ಖಾಲಿ ಆಗುತ್ತೆ. ಪಿಜಿಗಳು ಫುಲ್ ಖಾಲಿ ಆಗುತ್ತೆ. ಕೋರಮಂಗಲ ಕ್ಲಬ್ಗಳು ಕೂಡ ಖಾಲಿ ಆಗುತ್ತೆ. ಆ ಮೇಲೆ ಕ್ಲಬ್ಗಳಲ್ಲಿ ಕುಣಿಯಲು ಹುಡುಗಿಯರೇ ಇರೋಲ್ಲ ಕಣ್ರೋ ಅಂತಾ ಗಾರ್ಡನ್ ಸಿಟಿ ಜನ್ರನ್ನ ಕೆಣಕಿದ್ದಾಳೆ. ಸದ್ಯ ಯುವತಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನುಪಮಾ ಗೌಡ, ಚಂದನ್ ಶೆಟ್ಟಿ ಸೇರಿ ಹಲವರು ವಿಡಿಯೋ ಮಾಡಿ ಯುವತಿ ವಿರುದ್ಧ ಕಿಡಿ ಕಾರಿದ್ದಾರೆ. ಕೆಲವು ದಿನಗಳ ಹಿಂದೆ ಆಟೋ ಚಾಲಕ ಹಲ್ಲೆ ಮಾಡಿದ್ದಕ್ಕೆ ಉತ್ತರ ಭಾರತ ಮೂಲದ ಯುವತಿ ಪೊಲೀಸರಿಗೆ ದೂರು ನೀಡಿದ್ಲು. ಬಳಿಕ ಪೊಲೀಸರು ಆಟೋ ಚಾಲಕನನ್ನು ಅರೆಸ್ಟ್ ಮಾಡಿದ್ರು. ಈ ವೇಳೆಯೂ ಯುವತಿಯೊಬ್ಬಳು ಬೆಂಗಳೂರಿಗರ ಬಗ್ಗೆ ಹಗುರವಾಗಿ ಮಾತಾಡಿ ಟೀಕೆಗೆ ಗುರಿಯಾಗಿದ್ಲು.ಈ ಕಹಿನೆನಪುಗಳು ಮಾಸುವ ಮುನ್ನವೇ ಮತ್ತೊಬ್ಬಾಕೆ ನಾಲಗೆ ಹರಿಬಿಟ್ಟಿದ್ದಾಳೆ.
Post a comment
Log in to write reviews