ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಿತು. ಕನಕಪುರ ರಸ್ತೆಯ ನೆಲಗುಳಿಯ ಫಾರಂಹೌಸ್ನಲ್ಲಿರುವ ಚಿರು ಸಮಾಧಿಗೆ ಚಿರು ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.
ಚಿರು ಸಮಾಧಿ ಬಳಿ ಧ್ರುವ ಸರ್ಜಾ ಏದುಸಿರು ಬಿಡುತ್ತಾ ಅಣ್ಣನನ್ನು ನೆನೆದರು. ಚಿರು ಪತ್ನಿ ಮೇಘನಾ ರಾಜ್ ,ಪುತ್ರ ರಾಯನ್ ರಾಜ್ ಹಾಗೂ ಧ್ರುವ ಸರ್ಜಾ ಪತ್ನಿ ಹಾಗೂ ಇಬ್ಬರು ಮಕ್ಕಳು ಜೊತೆಯಾಗಿದ್ದರು. ಅಭಿಮಾನಿಗಳಿಗೂ ಚಿರಂಜೀವಿ ಸಮಾಧಿ ದರ್ಶನ ಮಾಡೋಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿ ಚಿರು ಸಮಾಧಿ ದರ್ಶನ ಪಡೆದರು.
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ ಕಳೆದಿದೆ. ಕಳೆದ 2020 ರ ಜೂನ್ ನಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು.
Post a comment
Log in to write reviews