ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕಳೆದ ದಿನಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ನಟಿ ಸೋನಾಲ್ ಮಂಟೋರ್ ಜೊತೆ ಮದುವೆ ಆಗ್ತಾ ಇದ್ದು, ತಮ್ಮ ಮದುವೆಯ ಕರೆಯೋಲೆ ನೀಡಲು ನಿರ್ದೇಶಕ ತರುಣ್ ಸುಧೀರ್ ಜೈಲಿಗೆ ಭೇಟಿ ನೀಡಿದ್ದರು.
ಸದ್ಯ ದರ್ಶನ್ ನೋಡಲು ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಹಾಗು ನಟ ವಿನೋದ್ ಪ್ರಭಾಕರ್, ನಟಿ ರಕ್ಷಿತಾ ಪ್ರೇಮ್ ಜೈಲಿಗೆ ಭೇಟಿ ನೀಡಿ ದರ್ಶನ್ಗೆ ಧೈರ್ಯ ತುಂಬಿದ್ದರು. ಈಗ ರಾಬರ್ಟ್ ಹಾಗು ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್, ನಟ ಯಶಸ್ ಸೂರ್ಯ, ಶಾಸಕ ದರ್ಶನ್ ಪುಟ್ಟಣಯ್ಯ ಅವರು ಶುಕ್ರವಾರ (ಜುಲೈ 20)ರಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಮಾತುಕತೆ ನಡೆಸಿದರು.
ದರ್ಶನ್ ಭೇಟಿ ಮಾಡಿದ ಬಳಿಕ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯಿಸಿ, ದರ್ಶನ್ಗೆ ಹುಷಾರು ಇರಲಿಲ್ಲ. ಈಗ ಚೆನ್ನಾಗಿದ್ದಾರೆ. ಯಾವಾಗಲೂ ನನ್ನನ್ನು ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಾ ಇದ್ರೋ. ಅದೇ ರೀತಿ ರಿಯಾಕ್ಟ್ ಮಾಡಿದ್ರು ಎಂದರು.
ಮದುವೆ ವಿಚಾರ ಮೊದಲೇ ಅವರಿಗೆ ಗೊತ್ತಿತ್ತು. ಆದರೂ ನಟ ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ನನಗಿದೆ. ಆದ್ರೆ ನಿಗದಿತ ದಿನಾಂಕದಂದೇ ಮದುವೆ ಆಗು ಅಂದ್ರು. ಅಷ್ಟೊತ್ತಿಗೆ ನಾನು ಬರ್ತಿನಿ ಅಂದ್ರು ಅಂತಾ ಹೇಳಿದರು.
ದರ್ಶನ್ ಅವ್ರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ಇದ್ದಿವಿ. ಹಾಗೇ ಆಗಲಿ ಅಂತಾ ದೇವರಲ್ಲಿ ಕೇಳಿಕೊಳ್ಳುತ್ತಿವೆ. ನನ್ನ ಮದುವೆ ವೇಳೆಗೆ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗುವ ನಂಬಿಕೆ ಇದೆ. ಇನ್ವಿಟೇಷನ್ಗೆ ಅವಕಾಶ ಇಲ್ಲ. ಅದಕ್ಕೆ ಆರ್ಶೀರ್ವಾದ ಮಾತ್ರ ಪಡೆದುಕೊಂಡೆ. ನಂತರ ಜನರಲ್ ಆಗಿ ಸಿನಿಮಾ ಇಂಡಸ್ಟ್ರಿ ಬಗ್ಗೆ ಚರ್ಚೆ ಆಯ್ತು. ಯಾವಾಗಲೂ ಅವರಿಗೆ ಸಿನಿಮಾ ಇಂಡಸ್ಟ್ರಿ ಬಗ್ಗೆ ತುಂಬಾ ಕಾಳಜಿ ಇದೆ. ಇನ್ನು ಜೈಲು ಊಟ ಅಡ್ಜಸ್ಟ್ ಆಗ್ತಿಲ್ಲ ಎಂದು ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ. ಮೇಲ್ನೋಟಕ್ಕೆ ಸ್ವಲ್ಪ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ ಅಂತಾ ತರುಣ್ ಸುಧೀರ್ ಹೇಳಿದರು.
ಇನ್ನು ಆಗಸ್ಟ್ 10 ಹಾಗು 11ರಂದು ನಿರ್ದೇಶಕ ತರುಣ್ ಸುಧೀರ್ ಸೋನಾಲ್ ಜೊತೆ ಮದುವೆ ಆಗ್ತಾ ಇದ್ದಾರೆ. ತರುಣ್ ಸುಧೀರ್ ಹೇಳಿಕೆ ಗಮನಿಸೋದಾದ್ರೆ. ಸ್ಪೆಷಲ್ ರಿಕ್ವೆಸ್ಟ್ ಮೇಲೆ ದರ್ಶನ್ ಮದುವೆಗೆ ಹೋಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ತರುಣ್ ಸುಧೀರ್ ಹೇಳಿಕೆ ದರ್ಶನ್ ಅಭಿಮಾನಿ ಬಳಗಕ್ಕೆ ತುಂಬಾ ಸಂತೋಷವನ್ನುಂಟುಮಾಡಿದೆ.
Post a comment
Log in to write reviews