ಬೇಬಿ ಬಿಟ್ಟು ಹೋದ್ಲು ಎಂದು ಕಣ್ಣೀರಿಟ್ಟ ನಟ ನರೇಶ್; ಕೈ ಕೊಟ್ರಾ ನಟಿ ಪವಿತ್ರಾ ಲೋಕೇಶ್?
ಬೆಂಗಳೂರು: ನರೇಶ್ ಅಳುತ್ತಿರುವ ವಿಡಿಯೋ ಇದೀಗ ವೈರಲ್ ಆಗ್ತಿದ್ದು, ವಿಡಿಯೋಗೆ ನೆಟ್ಟಿಗರು ಪವಿತ್ರಾ ಲೋಕೇಶ್ ಕೈ ಕೊಟ್ರಾ ಎಂದು ಪ್ರಶ್ನಿಸಿದ್ದಾರೆ.
ನರೇಶ್ ಕಣ್ಣೀರ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?
ನಟ ನರೇಶ್ ‘ ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ನಾನು ಎಲ್ಲರ ಬಳಿ ಕೇಳುತ್ತಲೇ ಇದ್ದೇನೆ. ನನಗೆ ಆ ಬೇಬಿಯನ್ನು ಒಂದು ದಿನ ನೋಡದಿದ್ದರೂ ಆಗುವುದಿಲ್ಲ. ಈ ವೇಳೆ ನನ್ನ ಕಲ್ಕಿ ಸಿನಿಮಾ ಕೂಡ ಸಖತ್ ಸದ್ದು ಮಾಡುತ್ತಿರುವ ಕಾರಣಕ್ಕೆ ನಾನು ಬ್ಯುಸಿ ಆಗಿದ್ದೇನೆ. ನನಗೆ ನನ್ನ ಬೇಬಿ ಕಾಣುತ್ತಿಲ್ಲ, ಹುಡುಕಲೂ ಆಗುತ್ತಿಲ್ಲ. ಬಹಳಷ್ಟು ಜನ ಬೇಬಿ ಕಳೆದುಕೊಂಡಿರುವ ನನ್ನ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ತಮಗೆ ಯಾರೆಂದು ಕೂಡ ಗೊತ್ತಿಲ್ಲ ಎನ್ನುತ್ತಿದ್ದಾರೆ. ನನ್ನ ಬೇಬಿ ಯಾರೆಂದು ನಿಜವಾಗಿಯೂ ನಿಮಗೆ ಗೊತ್ತಿಲ್ಲವೇ?
ಆದರೆ, ನನಗೆ ನನ್ನ ಬೇಬಿ ಬೇಕು. ಯಾರಾದರೂ ಹೇಗಾದರೂ ಮಾಡಿ ಹುಡುಕಿಕೊಡಿ…’ ಹೀಗೆಂದು ಅಳುತ್ತಾ ವಿಡಿಯೋ ಮಾಡಿದ್ದು, ಅದನ್ನು ಚಿತ್ರದ ಟೀಮ್ ಸೇರಿದಂತೆ ನಟ ನಾಗ್ ಅಶ್ವಿನ್ಗೆ ಸಹ ಟ್ಯಾಗ್ ಮಾಡಿದ್ದಾರೆ. ‘ಮಗುವನ್ನು ಹೇಗೆ ಪಡೆಯುವುದು ಎಂದು ಸಿನಿಮಾ ಮಂದಿಗೆ ಗೊತ್ತು’ ಎಂದು ಕಲ್ಕಿ ನಟ ವಿನಂತಿಸಿದ್ದಾರೆ. ನರೇಶ್ ಅಳುತ್ತಾ ಮಾತಾಡಿರುವ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಅಗಿದ್ದಾರೆ. ನಟ ನರೇಶ್ ಹೇಳುತ್ತಿರುವ ಆ ಬೇಬಿ ಯಾರು? ನಟ ನರೇಶ್ ಆ ಬೇಬಿಯ ಬಗ್ಗೆ, ಅದರ ಜತೆ ತಮ್ಮ ಸಂಬಂಧದ ಬಗ್ಗೆ ವೀಡಿಯೋ ಕೊನೆಯಲ್ಲಿ ಹೇಳಿದ್ದಾರೆ. ಆದರೆ ಅದನ್ನು ಕೊನೆಯವರೆಗೆ ನೋಡುವ ಮೊದಲೇ ಹಲವರು ಬೇಬಿ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡು ಗಾಬರಿಯಾಗಿದ್ದಾರೆ, ಕಾಲೆಳೆದಿದ್ದಾರೆ, ಬಗೆಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಹಾಗಿದ್ದರೆ, ಆ ಬೇಬಿ ಯಾರು? ಆ ವಿಡಿಯೋದ ಅಸಲಿಯತ್ತೇನು ಎಂದು ಹುಡುಕ ಹೊರಟರೆ ಅದಕ್ಕೆ ಬೇರೆಯದೇ ಆಯಾಮ ದೊರಕುತ್ತದೆ. ನಟ ನರೇಶ್ ಅವರು ತಮ್ಮ ಹೊಸ ಚಿತ್ರದ ಪ್ರಚಾರಕಾರ್ಯಕ್ಕೆ ಬಳಿಸಿಕೊಂಡ ಭಾವನಾತ್ಮಕ ತಂತ್ರ ಇದು ಎನ್ನಲಾಗಿದೆ. ಈ ಹಿಂದೆ ಕೂಡ ನಟ ನರೇಶ್ ಈ ರೀತಿಯ ಗಿಮಿಕ್ ಮಾಡಿದ್ರು. ಹಿಂದೆಯೂ ಮಲ್ಲಿ ಪೆಳ್ಳಿ ಸಿನಿಮಾದ ವೇಳೆ ಪವಿತ್ರಾ ಲೋಕೇಶ್ ಅವರ ಜತೆಗಿನ ಸಿನಿಮಾದ ಕಿಸ್ ಸೀನ್, ಮದುವೆ ಆದ ವಿಡಿಯೋವನ್ನು ಶೇರ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ರು. ಈಗಲೂ ನಟ ನರೇಶ್ ಮತ್ತೊಂದು ಸಿನಿಮಾದ ಪ್ರಚಾರ ಕೆಲಸಕ್ಕೆ ಈ ರೀತಿ ಬೇಬಿ ಹುಡುಕಿಕೊಡಿ ಎಂದು ಗಿಮಿಕ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
Post a comment
Log in to write reviews