ಮಹಾರಾಷ್ಟ್ರದಲ್ಲಿ ಭೀಕರ ಹತ್ಯೆಯೊಂದು ನಡೆದ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ಗೂ ನಡುಕ ಶುರುವಾಗಿದೆ. ಈಗಾಗಲೇ ಸಲ್ಮಾನ್ ಖಾನ್ ಮೇಲೆ ಗುಂಡಿನ ದಾಳಿಯೂ ನಡೆದಿದ್ದು, ಸನ್ಮಾನ್ ಜಸ್ಟ್ ಮಿಸ್ ಆಗಿದ್ದಾರೆ. ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ಶ್ರೀಮಂತ ಹಾಗೂ ಮಾಜಿ ಸಚಿವನನ್ನೇ ಹತ್ಯೆ ಮಾಡಿದ್ದು ನಾವೇ ಎಂದು ಬಿಷ್ಣೋಯ್ ಗ್ಯಾಂಗ್ ಘೋಷಿಸಿಕೊಂಡಿರುವುದು ವರದಿಯಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಭಾರತೀಯ ಚುನಾವಣಾ ಆಯೋಗವು ಯಾವುದೇ ಕ್ಷಣದಲ್ಲಾದರೂ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರವು ಸಹ ಫ್ರೀ ಗಿಫ್ಟ್‌ಗಳ ಮೂಲಕ ಮತದಾರರನ್ನು ಸೆಳೆಯುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಚುನಾವಣೆ ಗುಂಗಿನಲ್ಲಿ ಇರುವಾಗಲೇ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ಮುಖಂಡ ಬಾಬಾ ಸಿದ್ಧಿಕಿ ಅವರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರಭಾವಿ ಸಚಿವರ ಹತ್ಯೆಯ ಬೆನ್ನಲ್ಲೇ ಬಾಲಿವುಡ್‌ನ ಟಾಪ್‌ಕ್ಲಾಸ್ ನಟ ಸಲ್ಮಾನ್ ಖಾನ್ ಹಾಗೂ ಅವರ ಆತ್ಮೀಯ ಬಳಗದಲ್ಲಿ ಹೊಸ ಆತಂಕ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆಯನ್ನು ಸಹ ಮಹಾರಾಷ್ಟ್ರದ ಪೊಲೀಸರು ಕಲ್ಪಿಸಿದ್ದಾರೆ. ಅಲ್ಲದೇ ಅವರ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಮುತುವರ್ಜಿಯನ್ನು ಸಹ ವಹಿಸಲಾಗುತ್ತಿದೆ.
ಸಲ್ಮಾನ್ ಖಾನ್ ಗುರಿಯಾಗಿಸಿ ಸಿದ್ಧಿಕೆ ಹತ್ಯೆ:
ಸಿದ್ಧಿಕೆ ಹತ್ಯೆಯ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್‌ಗೂ ನಡುಕ ಶುರುವಾಗಿದೆ. ಸಿದ್ಧಿಕೆ ಅವರನ್ನು ಹತ್ಯೆ ಮಾಡಿದ ಗ್ಯಾಂಗ್ ಸನ್ಮಾನ್ ಖಾನ್ ಅನ್ನೂ ಟಾರ್ಗೆಟ್ ಮಾಡಿದೆ. ಈ ಹಿಂದೆಯೂ ಸನ್ಮಾನ್ ಖಾನ್ ಹತ್ಯೆಗೆ ಪ್ರಯತ್ನಗಳು ನಡೆದಿದ್ದವು. ಇದೀಗ ಸನ್ಮಾನ್ ಖಾನ್ ಅವರು ಆತ್ಮೀಯವಾಗಿದ್ದ ಸಿದ್ಧಿಕೆ ಅವರನ್ನು ಹತ್ಯೆ ಯಾಕೆ ಮಾಡಲಾಯಿತು ಎನ್ನುವ ವಿಚಾರವು ಭಾರೀ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಆದರೆ, ಸಲ್ಮಾನ್ ಖಾನ್‌ನೊಂದಿಗೆ ಸಿದ್ಧಿಕೆ ಆತ್ಮೀಯ ಒಡನಾಟ ಹೊಂದಿದ್ದರು. ಇದೇ ಕಾರಣಕ್ಕೆ ಅವರ ಹತ್ಯೆಯನ್ನೂ ಮಾಡಲಾಗಿದೆ ಎನ್ನುವ ವಿಷಯ ಇದೀಗ ಚರ್ಚೆಯಾಗುತ್ತಿದೆ. ಮಾಜಿ ಸಚಿವ ಸಿದ್ಧಿಕೆ ಕೊಲೆಯನ್ನು ಲಾರೆನ್ಸ್ ಬಿಷ್ಣೋಯ್ ಎನ್ನುವ ಗ್ಯಾಂಗ್ ಮಾಡಿದೆ ಎನ್ನುವ ಸಂಶಯ ಇದೆ.
ಕೃಷ್ಣಮೃಗ ಬೇಟೆಯೇ ಕಾರಣವೇ:
ನಟ ಸಲ್ಮಾನ್ ಖಾನ್‌ನನ್ನು ದುಷ್ಕರ್ಮಿಗಳು ಫಾಲೋ ಮಾಡುತ್ತಿರುವುದು ಅಥವಾ ಹತ್ಯೆಗೆ ಪ್ರಯತ್ನಿಸುತ್ತಿರುವುದರ ಹಿಂದೆ ಇರುವ ಪ್ರಮುಖ ಕಾರಣವೆಂದರೆ, ಸಿನಿಮಾದ ಶೂಟಿಂಗ್‌ವೊಂದರಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟಿಯಾಡಿರುವುದು. ಹೌದು 1998ರಲ್ಲಿ ಸಿನಿಮಾ ಶೂಟಿಂಗ್ ವೇಳೆ ರಾಜಸ್ಥಾನದಲ್ಲಿ ಸಲ್ಮಾನ್ ಖಾನ್ ಅವರು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಈ ಪ್ರಕರಣದ ನಂತರ ನಿರ್ದಿಷ್ಟ ಸಮುದಾಯವೊಂದು ಸಲ್ಮಾನ್ ಖಾನ್ ವಿರುದ್ಧ ಅಸಮಾಧಾನ ಹಾಗೂ ಆಕ್ರೋಶಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ಜಾಮೀನು ಸಿಕ್ಕಿದೆ. ಕೃಷ್ಣಮೃಗವನ್ನು ರಾಜಸ್ಥಾನದಲ್ಲಿ ಬಿಷ್ಣೋಯ್ ಸಮುದಾಯ ದೇವರ ಸಮಾನವಾಗಿ ಕಾಣುತ್ತದೆ. ಈ ಹತ್ಯೆ ಅವರನ್ನು ಆಘಾತಕ್ಕೆ ದೂಡಿದೆ. ಅದೇ ಕಾರಣಕ್ಕೆ ಸಲ್ಮಾನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಾಗಿ ದಶಕಗಳೇ ಕಳೆದಿವೆ. ಇದೀಗ ಅವರನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಇಷ್ಟು ಹಳೆಯ ಪ್ರಕರಣ ಕಾರಣವಾಗಿರಲಿಕ್ಕಿಲ್ಲ ಎಂದೂ ಹೇಳಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎಂದು ಈ ಹಿಂದೆಯೊಮ್ಮೆ ಅಖಿಲ ಭಾರತ ಬಿಷ್ಣೋಯ್ ಸಮುದಾಯದ ಅಧ್ಯಕ್ಷ ದೇವೇಂದ್ರ ಬುದಿಯಾ ಅವರು ಸಹ ಮಾತನಾಡಿದ್ದರು. ಸಲ್ಮಾನ್ ಖಾನ್ ಅವರು ದೇವಸ್ಥಾನಕ್ಕೆ ಬಂದು ಕ್ಷಮಾಪಣೆ ಕೇಳಿದರೆ, ನಾವು ವಿಚಾರ ಮಾಡುತ್ತೇವೆ ಎಂದಿದ್ದರು. ಆದರೆ, ಸಲ್ಮಾನ್ ಖಾನ್ ಅವರು ಕ್ಷಮಾಪಣೆ ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.
Post a comment
Log in to write reviews