Samayanews.

Samayanews.

2024-11-14 10:46:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!

ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವಿಲ್ಲ. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡ ಈ ಚೆಲುವೆ ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಭಾವನಾ ಮೆನನ್ ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ, ಕಿಚ್ಚ ಸುದೀಪ್‌ ಅವರ ವಿಷ್ಣುವರ್ಧನ್‌ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಖ್ಯಾತಿ ಗಳಸಿದರು. ಇವರ ಅದ್ಭುತ ಅಭಿನಯಕ್ಕೆ ಅಪಾರ ಅಭಿಮಾನಿಗಳ ಬಳಗವೇ ಇದೆ.

ಇತ್ತೀಚೆಗೆ ಖ್ಯಾತ ನಟಿ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿ ಮಾದ್ಯಮಗಳಲ್ಲಿ ಹರಿದಾಡುತ್ತಿತ್ತು. ಇದೀಗ ಈ ಊಹಾಪೋಹಗಳಿಗೆ ನಟಿ ತೆರೆ ಎಳೆದಿದ್ದಾರೆ.

ಹೌದು ನಟಿ ಭಾವನಾ ಮೊದಲ ಬಾರಿಗೆ ವಿಚ್ಛೇದನದ ವದಂತಿಯ ಬಗ್ಗೆ ಮಾತನಾಡಿದ್ದಾರೆ. "ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ನನ್ನ ಪತಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ. ಅಂದ ಮಾತ್ರಕ್ಕೆ ನಾವು ವಿಚ್ಛೇದನ ಪಡೆದಿದ್ದೇವೆ. ನಾನು ನನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿದ್ದೇನೆ, ಎಂದಲ್ಲ , ಎಲ್ಲವನ್ನೂ ಸೋಷಿಯಲ್‌ ಮಿಡಿಯಾದಲ್ಲಿ ಸಾಬೀತು ಪಡಿಸುವ ಅಗತ್ಯವಿಲ್ಲ ನಾವೀಬ್ಬರೂ ಚೆನ್ನಾಗಿಯೇ ಇದ್ದೇವೆ"

"ಅಲ್ಲದೇ ಪ್ರತಿಬಾರಿಯೂ ನಾನು ನನ್ನ ಗಂಡನ ಬಳಿಗೆ ಹೋಗಿ ನಮ್ಮ ಸಂಬಂಧದ ಪೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಾಕಲು ಸಾಧ್ಯವಿಲ್ಲ, ನಾವು ಒಟ್ಟಿಗೆ ಇದ್ದೇವೆ ಎಂದು ಪ್ರತಿಬಾರಿ ಜನರಿಗೆ ತೋರಿಸುವ ಅಗತ್ಯವೂ ಇಲ್ಲ.." ಎಂದು ನಟಿ ವಿಚ್ಚೇದನ ವದಂತಿಗೆ ಫುಲ್‌ ಸ್ಟಾಪ್‌ ಹಾಕಿದ್ದಾರೆ.

img
Author

Post a comment

No Reviews