ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎನ್‌ಜಿಒಎಸ್ ಕಾಲೋನಿ ನಿವಾಸಿ 43 ವರ್ಷದ ಉಷಾ ಬಂಧಿತ ಮಹಿಳೆ. ಆರೋಪಿಯಿಂದ 4 ಲಕ್ಷ ಮೌಲ್ಯದ 66 ಗ್ರಾಂ ಚಿನ್ನ ಮತ್ತು 115 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿಮಾಡಲಾಗಿದೆ.
ಎನ್‌ಎಚ್ ಸಿಎಸ್ ಲೇಔಟ್ನಲ್ಲಿ ವಾಸವಾಗಿರುವ ಛಾಯಾಸಿಂಗ್ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ ಅವರ ಮನೆಯಲ್ಲಿ 2 ವಷ೯ಗಳಿಂದ ಆರೋಪಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ -ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಸಾಲ ತೀರಿಸುವ ಸಲುವಾಗಿ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
Post a comment
Log in to write reviews