ನವದೆಹಲಿ : ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್ ಬರ್ಗ್ ರಿಸರ್ಚ್ ಆರೋಪದ ಬೆನ್ನಲ್ಲೇ ಅದಾನಿ ಸಮೂಹದ ಎಲ್ಲ ಷೇರುಗಳ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಅದಾನಿ ಎನರ್ಜಿ ಶೇಕಡ 17ರಷ್ಟು ಕುಸಿತದೊಂದಿಗೆ ವಹಿವಾಟು ಆರಭಿಸಿದೆ ಎಂದು ವರದಿ ತಿಳಿಸಿದೆ.
ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ಜೊತೆ ಹಿತಾಸಕ್ತಿ ಹೊಂದಿದ್ದಾರೆ ಎನ್ನುವಂತಹ ಆರೋಪವೊಂದನ್ನು ಹಿಂಡನ್ಬರ್ಗ್ ಮಾಡಿತು. ಈ ಕಾರಣಕ್ಕೆ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಿಗೆ ಸೋಮವಾರ ಹಿನ್ನಡೆ ಆಗಿದೆ.
ಬಿಎಸ್ಇಯ ಅದಾನಿ ಎನರ್ಜಿ ಸಲ್ಯೂಷನ್ ಶೇಕಡ 17 ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇಕಡ 13.39 ಮತ್ತು ಎನ್ಡಿಟಿವಿ ಷೇರುಗಳ ಬೆಲೆಯಲ್ಲಿ ಶೇಕಡ 11ರಷ್ಟು ಕುಸಿತ ಕಂಡಿದೆ. ಅದಾನಿ ಪವರ್ ಶೇಕಡ 10.94ರಷ್ಟು ಕುಸಿತ ಕಂಡಿದೆ.
ಅದಾನಿ ಗ್ರೀನ್ ಎನರ್ಜಿ ಶೇಕಡ 6.96ರಷ್ಟು, ಅದಾನಿ ವಿಲ್ಮರ್ ಶೇಕಡ 6.49ರಷ್ಟು, ಅದಾನಿ ಎಂಟರ್ಪ್ರೈಸ್ ಶೇಕಡ 5.43, ಅದಾನಿ ಪೋರ್ಟ್ಸ್ ಶೇಕಡ 4.95ರಷ್ಟು, ಅಂಬುಜಾ ಸಿಮೆಂಟ್ ಶೇಕಡ 2.53ರಷ್ಟು ಮತ್ತು ಎಸಿಸಿ 2.42ರಷ್ಟು ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲಿಸಿದೆ
ಸೆಬಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬುಚ್ ದಂಪತಿ, ಹಿಂಡೆನ್ವರ್ಗ್ ಆರೋಪವು ಸೆಬಿ ಮೇಲಿನ ವಿಶ್ವಾಸಾರ್ಹತೆಯ ಮೇಲಿನ ದಾಳಿ ಮತ್ತು ನಮ್ಮ ಹೆಸರು ಹಾಳುಮಾಡುವ ಯತ್ನ ಎಂದು ದೂರಿದ್ದಾರೆ.
Post a comment
Log in to write reviews