ದಾವಣಗೆರೆ: ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟ ಆದಿಲ್‌ನ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಆತನ ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಆಗಿದೆ ಎಂದು ತಿಳಿದು ಬಂದಿದೆ.
ಮಟ್ಕಾ ಜೂಜಾಟ ಅನುಮಾನದ ಮೇಲೆ ವಿಚಾರಣೆ ನಡೆಸಲು ಚನ್ನಗಿರಿ ಪೊಲೀಸರು ಆದಿಲ್‌ನನ್ನು ಕಳೆದ ಶುಕ್ರವಾರ ಪೊಲೀಸ್ ಠಾಣೆಗೆ ಕರೆತಂದಿದ್ದರು. ನಂತರ ಆತ ಮೃತಪಟ್ಟಿದ್ದ ವೇಳೆ ಕುಟುಂಬದವರಿಂದ ಗಲಾಟೆ ನಡೆದಿತ್ತು.
ಪ್ರಕರಣ ಸಂಬಂಧ ಆದಿಲ್ ಮರಣೋತ್ತರ ಪರೀಕ್ಷೆಯು ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಪ್ರಶಾಂತ್ ಉಪಸ್ಥಿತಿಯಲ್ಲಿ ಶನಿವಾರ ನಡೆದಿತ್ತು. ಆದಿಲ್ ಸಾವು ಲಾಕಪ್ ಡೆತ್ ಎಂದು ಕೆಲವರು ಆರೋಪಿಸಿದ್ದರು. ಆದಿಲ್ ಠಾಣೆಯಲ್ಲಿ ಇದ್ದಿದ್ದು ಕೇವಲ 6ರಿಂದ 7 ನಿಮಿಷ. ಅಲ್ಲಿ ಕುಸಿದು ಬಿದ್ದ ಅಷ್ಟು ಹೊತ್ತಿಗೆ ಆತ ಮೃತಪಟ್ಟಿದ ಎಂದು ಪೊಲೀಸರು ಹೇಳಿಕೆ ನೀಡಿದರು. ಲೋ ಬಿಪಿ ಆಗಿರಬಹುದು ಎಂದು ಆದಿಲ್ ತಂದೆ ಖಲೀಂ ಉಲ್ಲಾ ಹೇಳಿಕೆ ನೀಡಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು. ಘಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಪ್ರಶಾಂತ್ ಮನೋಳಿ ಸೇರಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
Post a comment
Log in to write reviews