ಉಡುಪಿ : ಜಿಲ್ಲೆಯ ಪರ್ಕಳ ಪರಿಸರದಲ್ಲಿ ಮತ್ತೆ ಆಫ್ರಿಕನ್ ಮಾದರಿಯ ಬಸವನ ಹುಳು ಕಾಣಿಸಿಕೊಳ್ಳುತ್ತಿವೆ. ದೇವಿ ನಗರದ ಸುತ್ತಮುತ್ತ ಪರಿಸರದಲ್ಲಿ ಆಫ್ರಿಕನ್ ಮಾದರಿಯ ಬಸವನ ಹುಳು ಯಥೇಚ್ಛವಾಗಿ ಗೋಡೆಗಳಲ್ಲಿ ಹರಿಯಲಾರಂಭಿಸಿದೆ.
ಮನೆಗಳ ಕಾಂಪೌಂಡ್ವಾಲ್ಗಳ ಮೇಳೆ ಆಫ್ರಿಕನ್ ಮಾದರಿಯ ಬಸವನ ಹುಳು ನಡೆದಾಡುತ್ತಿವೆ. ರಾತ್ರಿ ಹೊತ್ತಿನಲ್ಲಿ ಇದರ ಸಂಚಾರ ಹೆಚ್ಚಾಗಿದ್ದು. ಪಪ್ಪಾಯಿಗಿಡ, ಇನ್ನಿತರ ಹೂವಿನ ಗಿಡ, ಕ್ರೋಟನ್ ಗಿಡಗಳ ಎಲೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ಹೊರ ಸೂಸುವ ದ್ರವ್ಯ ವಾಸನೆಯಿಂದ ಕೂಡಿರುತ್ತದೆ. ಸ್ವಚ್ಛತೆ ಮಾಡಿದರೂ ಈ ಭಾಗದಲ್ಲಿ ಮತ್ತೆ ಮತ್ತೆ ಈ ಬಸವನ ಹುಳು ಕಾಟ ಆರಂಭವಾಗಿದೆ.
ಸೂಕ್ತ ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ : ಉಡುಪಿ ಪ್ರದೇಶದಲ್ಲಿ ನಗರ ಸಭೆಯವರು ಸೂಕ್ತವಾದ ಮದ್ದನ್ನ ಸಿಂಪಡಿಸಿ ಇದಕ್ಕೆ ಮುಕ್ತಿ ಹಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಉಡುಪಿ ನಗರಸಭೆ ಮತ್ತು ಸ್ವಲ್ಪ ಭಾಗ 80 ಬಡಗುಬೆಟ್ಟು ಪಂಚಾಯಿತಿಗೆ ಒಳಪಟ್ಟಿರುವುದರಿಂದ ಔಷಧ ಸಿಂಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹುಳುಬಾದೆಗೆ ಪೂರ್ಣ ವಿರಾಮ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Post a comment
Log in to write reviews