ನವದೆಹಲಿ: ನರೇಂದ್ರ ಮೋದಿ 3 ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ತಮ್ಮ ಸಚಿವ ಸಂಪುಟದಲ್ಲಿ 72 ಸಂಸದರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ. ಅದರಂತೆ ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ಮಾಜಿ ಮುಂಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಮಂತ್ರಿ ಸ್ಥಾನ ದೊರಕಿರುವುದು ವಿಶೇಷವಾಗಿದೆ.
ಆ ಮೂಲಕ ಕಳೆದ 25 ವರ್ಷದ ನಂತರ ಮತ್ತೆ ಜಾತ್ಯಾತೀತ ಜನತಾ ದಳ ಪಕ್ಷ ಕೇಂದ್ರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ 1996-1997 ರಲ್ಲಿ ಪ್ರಧಾನ ಮಂತ್ರಿ ಪಟ್ಟಕ್ಕೇರಿದ್ದ ದೇವೇಗೌಡರು ಗೃಹ ಸಚಿವಾಲಯ ಖಾತೆಯನ್ನು ತಮ್ಮ ಬಳಿಯೇ ಇಟ್ಟು ಕೊಂಡಿದ್ದಲ್ಲದೇ, ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಮತ್ತು ಸಿ.ಎಂ.ಇಬ್ರಾಹಿಂರವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದರು. ಆದಾದ ಬಳಿಕ ಜಾತ್ಯಾತೀತ ಜನತಾ ದಳ ಪಕ್ಷಕ್ಕೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಅವಕಾಶ ಒದಗಿರುವುದಿಲ್ಲಾ. 2024ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷದಿಂದ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗೆಲ್ಲುವ ಮೂಲಕ ಮೋದಿ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆ ಮೂಲಕ ಕೇಂದ್ರದಲ್ಲಿ 25 ವರ್ಷಗಳ ನಂತರ ಜಾತ್ಯತೀತ ಜನತಾ ದಳ ಪಕ್ಷಕ್ಕೆ ಕೇಂದ್ರ ಮಂತ್ರಿ ಸ್ಥಾನದ ಅದೃಷ್ಠ ಒಲಿದು ಬಂದಿದೆ.
Post a comment
Log in to write reviews