ಮುಂಬೈ: ಏರ್ ಪೋರ್ಟ್ ಲೋಡರ್‌ಗಳ ಹುದ್ದೆಗಾಗಿ ಏರ್ ಇಂಡಿಯಾ ಹಮ್ಮಿಕೊಂಡಿದ್ದ ಉದ್ಯೋಗ ನೇಮಕಾತಿಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು.
2,216 ಹುದ್ದೆಗಳಿಗಾಗಿ 25,000 ಉದ್ಯೋಗಾಕಾಂಕ್ಷಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರಿಂದ, ಅವರನ್ನು ನಿಯಂತ್ರಿಸಲು ವಿಮಾನ ನಿಲ್ದಾಣದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು ಎಂದು ವರದಿಯಾಗಿದೆ. ಅರ್ಜಿದಾರರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ಕಾಯಬೇಕಾಯಿತು. ಅವರಲ್ಲಿ ಹಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಏರ್ ಪೋರ್ಟ್ ಲೋಡರ್‌ಗಳು ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಏರ್ ಪೋರ್ಟ್ ಲೋಡರ್‌ಗಳಿಗೆ ತಿಂಗಳ ವೇತನ 20,000 ರಿಂದ 25,000 ರ ನಡುವೆ ಇರುತ್ತದೆ.
ಇತ್ತೀಚೆಗಷ್ಟೇ ಗುಜರಾತ್‌ನ ಖಾಸಗಿ ಕಂಪನಿಯೊಂದರಲ್ಲಿ ಖಾಲಿ ಇದ್ದ ಕೇವಲ 10 ಹುದ್ದೆಗಳಿಗೆ ಹತ್ತಿರತ್ತಿರ 1,800 ಉದ್ಯೋಗಾಕಾಂಕ್ಷಿಗಳು ಜಮಾಯಿಸಿ, ಕಟ್ಟಡದ ರೇಲಿಂಗ್ ಮುರಿದು ಬಿದ್ದಿದ್ದ ಘಟನೆ ನಡೆದಿತ್ತು. ಇದು ಕೂಡ ಏರ್ ಪೋರ್ಟ್ ಲೋಡರ್‌ಗಳ ಹುದ್ದೆಗಾಗಿ ಏರ್ ಇಂಡಿಯಾ ಹಮ್ಮಿಕೊಂಡಿದ್ದ ಉದ್ಯೋಗ ನೇಮಕಾತಿಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಗೆ ಎದುರಾಗಿ ಹಲವರು ಅಸ್ವಸ್ಥರಾಗಿದ್ದು ವರದಿಯಾಗಿದೆ.
Post a comment
Log in to write reviews