ಬೆಂಗಳೂರು: ಬಾಕಿ ಇರುವ ವೇತನ ಪಾವತಿಸುವಂತೆ ‘108 ಆಂಬ್ಯುಲೆನ್ಸ್’ ಸಿಬ್ಬಂದಿ ಕೋರ್ಟ್ ಮೊರೆ ಹೋಗಿದ್ದಾರೆ.
ಈಗಾಗಲೇ ಸರ್ಕಾರದ ವಿರುದ್ಧ ಹೊರಾಟ ನಡೆಸುತ್ತಿರುವ ಸಿಬ್ಬಂದಿಗಳು ತಮ್ಮ ಸಮಸ್ಯೆ ಪರಿಹರಿಸದಿದ್ದರೆ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವುದಾಗಿಯೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿಗಳು ಕಳೆದ ಆರು ತಿಂಗಳಿನಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಜಿವಿಕೆ ಸಂಸ್ಥೆ ನಡುವಿನ ಕಿತ್ತಾಟದಿಂದ ಆಂಬ್ಯುಲೆನ್ಸ್ ಸಿಬ್ಬಂದಿ ಬೀದಿಗೆ ಬೀಳುವಂತಾಗಿದೆ. ಕಳೆದ ಆರು ತಿಂಗಳಿನಿಂದ 3 ಸಾವಿರಕ್ಕೂ ಅಧಿಕ ನೌಕರರಿಗೆ ಸಂಬಳ ನೀಡಲಾಗಿಲ್ಲ. ಇದೀಗ ಆಂಬ್ಯುಲೆನ್ಸ್ ಸಿಬ್ಬಂದಿ. ಪ್ರತಿ ಸಿಬ್ಬಂದಿಗೆ ಜಿವಿಕೆ ಸಂಸ್ಥೆ ಈವರೆಗೆ 2.16 ಲಕ್ಷ ರೂ. ಸಂಬಳ ಬಾಕಿ ಉಳಿಸಿಕೊಂಡಿದೆ. ಇದೀಗ ಜಿವಿಕೆಗೆ ಆಂಬ್ಯುಲೆನ್ಸ್ ನೌಕರರ ಸಂಘ ಹೊಸ ಡೆಡ್ ಲೈನ್ ಕೊಟ್ಟಿದೆ. ಗುರುವಾರ ಸಂಜೆಯೊಳಗೆ ಸಂಬಳ ನೀಡದಿದ್ದರೆ ಮತ್ತೆ ಮುಷ್ಕರ ಹೂಡುವುದಾಗಿ ಎಚ್ಚರಿಕೆ ನೀಡಿದೆ.
ಮಕ್ಕಳ ಶಾಲೆ ಫೀಜ್, ರೇಷನ್, ಇತರೆ ಖರ್ಚಿಗೆ ಸಾಲ ಮಾಡುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಕುಟುಂಬ ಸಮೇತ ಬೀದಿಗಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Post a comment
Log in to write reviews