ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಮಾಡಿದ್ದ ಆರೋಪಿ ಮತ್ತೋವ೯ ಮಹಿಳೆಗೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ. ಅಂಜಲಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಗಿರೀಶ್ ಸಾವಂತ ಬೆಂಗಳೂರಿನಿಂದ ದಾವಣಗೆರೆಗೆ ರೈಲಿನಲ್ಲಿ ಬರುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.
ರೈಲಿನಲ್ಲಿ ಬಾತ್ ರೂಮ್ ಗೆ ಹೋಗಿದ್ದ ಮಹಿಳೆಯೊಂದಿಗೆ ಕಿರಿಕ್ ಮಾಡಿದ ಗಿರೀಶ್ ಸಾವಂತ ಮಹಿಳೆಗೆ ಚಾಕು ಹಾಕಲು ಯತ್ನಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಳ್ಳಲು ಮುಂದಾದಾಗ ಕೈಗೆ ಚಾಕುವಿಂದ ಗಾಯವಾಗಿದೆ. ಘಟನೆ ಕಂಡು ಮಹಿಳೆಯ ಪತಿ ಹಾಗು ಸಂಬಂಧಿಕರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೇ 16 ರೈಲ್ವೆ ಪೋಲಿಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಈ ಬಗ್ಗೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಇನ್ನೊಂದು ಎಫ್ ಐಆರ್ ದಾಖಲಾಗಿದೆ. ಆತನ ತಲೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆರೋಪಿ ಗಿರೀಶ್ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿದೆ.
Post a comment
Log in to write reviews