ಚಿತ್ರದುರ್ಗ: ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಮತ್ತೊಬ್ಬ ವೈದ್ಯ ಜನರ ಗಮನ ಸೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಯ ವೈದ್ಯ ಡಾ.ಸಂಜಯ್ ಅವರು ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಕನ್ನಡದಲ್ಲಿ ಔಷಧ ಚೀಟಿ ಬರೆಯುತ್ತಿದ್ದಾರೆ.
ಸದ್ಯ ಕೀಲು ಮೂಳೆ ತಜ್ಞ ಡಾ.ಸಂಜಯ್ ಅವರಿಂದ ವಿಶೇಷ ಪ್ರಯತ್ನ ಮಾಡಲಾಗುತ್ತಿದ್ದು, ಜೊತೆಗೆ ಕನ್ನಡದಲ್ಲೇ ಔಷಧ ಚೀಟಿಯಿಂದ ಅನೇಕರಿಗೆ ಅನುಕೂಲವಾಗಲಿದೆ. ಸದ್ಯ ಡಾ.ಸಂಜಯ್ ಕನ್ನಡದಲ್ಲೇ ಬರೆದ ಔಷಧ ಚೀಟಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಡಾ.ಸಂಜಯ್ ಕನ್ನಡದಲ್ಲೇ ಬರೆದ ಔಷಧ ಚೀಟಿ ಸಾಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗಿದೆ.
Post a comment
Log in to write reviews