ರಾಜ್ಯದ ಜನರಿಗೆ ಮತ್ತೊಂದು ಶಾಕ್ ! ಶುದ್ಧ ನೀರಿನ ಘಟಕಗಳಲ್ಲಿ 20 ಲೀಟರ್ ನೀರಿನ ದರ 10ರೂಗೆ ಏರಿಕೆ !
ಬೆಂಗಳೂರು: ಕೇವಲ 5 ರೂಪಾಯಿಗೆ 20 ಲೀಟರ್ ಶುದ್ಧ ಕುಡಿಯುವ ನೀರು ಒದಗುತ್ತಿತ್ತು ಆದರೆ ಇದೀಗ 20ಲೀ ಶುದ್ಧ ಕುಡಿಯುವ ನೀರಿನ ಬೆಲೆ 10ರೂ ಗೆ ಏರಿಕೆಯಾಗಿದೆ. ಇದರಿಂದ ದೇಶದ ಜನತೆಗೆ ಬಿಸಿಯ ಅನುಭವವಾಗಿದೆ.
ರಾಜ್ಯದಲ್ಲಿ 1,052 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನರು ನಿತ್ಯವೂ 5 ರೂ. ನಾಣ್ಯ ಬಳಸಿ 20 ಲೀಟರ್ ನೀರು ಪಡೆಯುತ್ತಿದ್ದರು. ಆದರೆ, ವಿದ್ಯುತ್ ಬಿಲ್ ಮತ್ತು ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣ ನೀಡಿ ಆರ್‌ಒ ಘಟಕಗಳ ನಿರ್ವಹಣೆ ಮಾಡುವ ಹಲವು ಏಜೆನ್ಸಿಗಳು ಕುಡಿಯುವ ನೀರಿನ ದರವನ್ನು 5ರೂ ಇದ್ದದ್ದನ್ನು 10 ರೂ.ಗೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ 5 ರೂ.ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಬದಿಯಲ್ಲಿ ಫಾಸ್ಟ್ ಫುಡ್, ಚಾಟ್ಸ್ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಪಿಜಿಗಳ ನಿರ್ವಹಣೆ ಮಾಡುವವರು, ಮನೆಯಲ್ಲಿ ನೀರು ಶುದ್ಧೀಕರಿಸಲು ಸಾಧ್ಯವಾಗದ ಅನೇಕರು ಕುಡಿಯಲು ಆರ್‌ಒ ಪ್ಲಾಂಟ್‌ಗಳ ನೀರನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಯಾವುದೇ ಸೂಚನೆ ನೀಡದೇ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ದರ ಏರಿಕೆಯಿಂದ ಜನಸಾಮಾನ್ಯರ ಜೀವನಾಡಿಯಂತಿದ್ದ ಶುದ್ಧ ನೀರಿನ ಘಟಕಗಳು ಜನತೆಗೆ ದುಬಾರಿಯಾದಂತಾಗಿದೆ.
Post a comment
Log in to write reviews