ನಿಮ್ಮ ತ್ವಚೆಯ ಕಾಳಜಿಯ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸಿಂಪಲ್ ಟಿಪ್ಸ್..
ಮೂಗಲ್ಲಿ ಮೊಡವೆ ಆದ್ರೆ ಏನು ಮಾಡೋದು?
ಮುಖದಲ್ಲಿ ಮೊಡವೆ ಆದ್ರೆ ಹೇಗೋ ಸಹಿಸಿಕೊಳ್ಳಬಹುದು . ಅದನ್ನು ತೆಗೆಯೋದಕ್ಕೆ ಸುಲಭದಲ್ಲಿ ಔಷಧಿ ಸಹ ಮಾಡಬಹುದು, ಆದ್ರೆ ಮೂಗೊಳಗೆ ಮೊಡವೆ ಆದ್ರೆ ಏನ್ ಮಾಡೋದು. ಅದಕ್ಕೆ ಕೆಲವು ಸರಳ ಮನೆ ಮದ್ದುಗಳು ಇಲ್ಲಿದೆ ನೋಡಿ
ಲಿಂಬೆಯ ರಸ
ಕೆಲವು ಸಲ ಲಿಂಬೆ ಹಣ್ಣಿನ ರಸದ ಸ್ಮೆಲ್ ತೆಗೆದುಕೊಳ್ತಾ ಇರಿ . ಒಂದು ಸಲ ಮೂಸಿದ್ರೆ ಸಾಕಾಗೋದಿಲ್ಲ . ಬದಲಾಗಿ ಹಲವು ಬಾರಿ ಲಿಂಬೆಯ ರಸದ ಸ್ಮೆಲ್ ತೆಗೆದುಕೊಳ್ಳುತ್ತಲೇ ಇರಬೇಕಾಗುತ್ತೆ , ಹತ್ತಿಯನ್ನು ಲಿಂಬೆರಸದಲ್ಲಿ ಅದ್ದಿ ಸಾಧ್ಯವಾದ್ರೆ ಮೂಗಿನಲ್ಲಿ ಮೊಡವೆಯಾದೆ ಜಾಗಕ್ಕೆ ಅಪ್ಲೈ ಮಾಡೋಕೆ ಟ್ರೈ ಮಾಡಿ .
ಲಿಂಬೆಯಲ್ಲಿ ಆಸಿಡಿಕ್ ಅಂಶಗಳಿರುವುದರಿಂದ ಮೂಗನ್ನು ಕ್ಲೀನ್ ಮಾಡಿ ಮೊಡವೆಗಳು ಡ್ರೈ ಆಗುವಂತೆ ಮಾಡುತ್ತೆ . 15 ನಿಮಿಷ ಹಾಗೆಯೇ ಬಿಡಿ .. ವಾಸನೆ ಸಹಿಸೋಕೆ ಆಗಿಲ್ಲ ಅಂತ ಕೂಡಲೇ ತೊಳೆದುಬಿಡಬೇಡಿ .
ಮಂಜುಗಡ್ಡೆ
ಐಸ್ ಪ್ಯಾಕ್ ಮಾಡಿಕೊಳ್ಳೋದು ಮೂಗಿನಲ್ಲಿರುವ ಮೊಡವೆಯನ್ನು ನಿವಾರಿಸಲು ಇರುವ ಇನ್ನೊಂದು ಬೆಸ್ಟ್ ಮೆಥೆಡ್ , ಕೆಲವು ತುಂಡು ಐಸ್ ಅನ್ನು ಇಲ್ಲವೇ ಕ್ರಷ್ ಮಾಡಿದ ಐಸ್ ಅನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅದನ್ನು ಮೂಗಿನಲ್ಲಿ ಮೊಡವೆಯಾಗಿ ನೋವಾಗುತ್ತಿರುವ ಜಾಗದಲ್ಲಿ ಪ್ಯಾಕ್ ಮಾಡ್ಕೊಳ್ಳಿ ಕೆಲವು ನಿಮಿಷ ಐಸ್ ಬಟ್ಟೆಯಿಂದ ಮೂಗಿನ ಮೇಲೆ ಪ್ರೆಸ್ ಮಾಡಿಕೊಳ್ತಾ ಇರಿ ಇದು ನೋವು ಹೆಚ್ಚಾಗುವುದು ಮತ್ತು ಮೊಡವೆಯ ಗಾತ್ರ ದೊಡ್ಡದಾಗುವುದನ್ನು ತಡೆಯುತ್ತೆ .
ಜೇನು
ಚರ್ಮದ ತೇವವನ್ನು ಹಿಡಿದಿಟ್ಟುಕೊಳ್ಳಲು ಜೇನು ಅತ್ಯುತ್ತಮವಾಗಿದ್ದು ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇನನ್ನು ಬಳಸಿ ಮುಖ ತೊಳೆಯುವ ಮೂಲಕ ಸೂಕ್ಷ್ಮರಂಧ್ರಗಳು ಕೊಳೆ ನಿವಾರಿಸಲು ಚರ್ಮ ಮೃದುವಾಗಿರಲು ನೆರವಾಗುತ್ತದೆ .
ಲಿಂಬೆ
ಎಣ್ಣೆ ಚರ್ಮದವರಿಗೆ ಲಿಂಬೆ ಅತ್ಯುತ್ತಮವಾಗಿದೆ .
ಇದು ತೆರೆದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಕೊಳೆಯನ್ನೂ ನಿವಾರಿಸುತ್ತದೆ . ಉತ್ತಮ ಪರಿಣಾಮ ಪಡೆಯಲು ಲಿಂಬೆರಸವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
Post a comment
Log in to write reviews